ಕೀವ್: ಮಾಸ್ಕೋದಲ್ಲಿ ಉಕ್ರೇನ್ ಪ್ರಶ್ನೆಗೆ ಅಂತಿಮ ಪರಿಹಾರದ ಯೋಜನೆಗಳು ನಡೆಯುತ್ತಿವೆ. ಇದು 2ನೇ ಮಹಾಯುದ್ಧದ ಸಮಯದಲ್ಲಿ ಯಹೂದಿಗಳ ನರಮೇಧದ ನಾಜಿ ಯೋಜನೆಯನ್ನು ಉಲ್ಲೇಖಿಸುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.
ರಷ್ಯಾದ ಆಕ್ರಮಣದ ಕುರಿತು ಇಸ್ರೇಲ್‍ನ ಸಂಸತ್ತಿನಲ್ಲಿ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಜನರು, ರಾಜ್ಯ, ಸಂಸ್ಕೃತಿ ಸಂಪೂರ್ಣ ವಿನಾಶವಾಗಿದೆ. ಇದರಿಂದಾಗಿ 2ನೇ ಮಹಾಯುದ್ಧಕ್ಕೆ ಉಕ್ರೇನ್‍ನ ದಾಳಿಯನ್ನು ಹೋಲಿಸುವ ಸಂಪೂರ್ಣ ಹಕ್ಕು ನನಗಿದೆ ಎಂದರು.
Advertisement
Advertisement
ಉಕ್ರೇನ್‍ನ ಜನರ ಪ್ರಸ್ತುತ ಪರಿಸ್ಥಿತಿಯನ್ನು 2ನೇ ಮಹಾಯುದ್ಧದಲ್ಲಿ ಯಹೂದಿಗಳ ನರಮೇಧ ಆದಂತೆ ಆಗಿದೆ ಎಂದ ಅವರು, ನಮ್ಮ ಹಾಗೂ ನಿಮ್ಮ ಬೆದರಿಕೆ ಒಂದೇ ಆಗಿದೆ. ಇದರಿಂದಾಗಿ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎನ್ನುವ ಸಮಯ ಬಂದಿದೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ
Advertisement
80 ವರ್ಷಗಳ ಹಿಂದೆ ಯಹೂದಿಗಳನ್ನು ಉಳಿಸಲು ಉಕ್ರೇನ್ ಆಯ್ಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿಶ್ವದ ನೀತಿವಂತ ಜನರು ಈಗ ಉಕ್ರೇನ್‍ನೊಂದಿಗೆ ನಿಂತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಸುಧಾಕರ್ ರಾಜೀನಾಮೆಗೆ ಎಎಪಿ ಆಗ್ರಹ
Advertisement
ಅಂತಾರಾಷ್ಟ್ರೀಯ ನಾಯಕರನ್ನು ಆಕರ್ಷಿಸಲು ಝೆಲೆನ್ಸ್ಕಿ ಐತಿಹಾಸಿಕ ದುರಂತಗಳನ್ನು ಆಹ್ವಾನಿಸಿದ್ದು ಇದೇ ಮೊದಲಲ್ಲ. ಅವರು ಪರ್ಲ್ ಹಾರ್ಬರ್ ಮತ್ತು ಸೆಪ್ಟೆಂಬರ್ 11, 2001ರ ಭಯೋತ್ಪಾದಕ ದಾಳಿಯ ಸ್ಮರಿಸಿ ಇತರೆ ದೇಶಗಳಿಗೂ ಸಹಾಯವನ್ನು ಮಾಡುವಂತೆ ಮನವಿ ಮಾಡಿದ್ದರು.