ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಾಲಮನ್ನಾದ ಲಾಭವನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಒಕ್ಕಲಿಗರು ಪಡೆಯಲಿದ್ದಾರೆ.
ಹೌದು. ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಕುಮಾರಸ್ವಾಮಿಯವರು 2 ಲಕ್ಷ ರೂ. ವರೆಗಿನ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರಿಂದ 33% ಒಕ್ಕಲಿಗರ ಸಾಲ ಮನ್ನಾ ಆಗಲಿದೆ.
Advertisement
ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿ ಅವರು ಕಳೆದ ವರ್ಷ ನಡೆಸಿದ ಸಮೀಕ್ಷೆಯಲ್ಲಿ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಬ್ಯಾಂಕಿನಿಂದ ಒಕ್ಕಲಿಗ ಸಮುದಾಯದವರು ಕೃಷಿ ಸಾಲ ಪಡೆದುಕೊಂಡಿದ್ದರೆ, ಎರಡನೇ ಸ್ಥಾನದಲ್ಲಿ ಗೊಲ್ಲ ಸಮುದಾಯದವರಿದ್ದರು.
Advertisement
Advertisement
ಜಾತಿವಾರು ಲೆಕ್ಕಾಚಾರ
ಒಕ್ಕಲಿಗ- ಶೇ.32
ಇತರೆ- ಶೇ.15.6
ಗೊಲ್ಲ- ಶೇ. 12.1
ಆದಿ ಕರ್ನಾಟಕ- ಶೇ.11.9
ಲಿಂಗಾಯತ- ಶೇ.10.9
ಕುರುಬ- ಶೇ.4.8
ಮಾದಿಗ- ಶೇ.4.3
ನಾಯಕ- ಶೇ.3.9
ಮುಸ್ಲಿಂ- ಶೇ.2.4
ಗಾಣಿಗ- ಶೇ.2.1
Advertisement
ಸಾಲಮನ್ನಾ ಎಷ್ಟು? ಷರತ್ತೇನು?:
ಮೊದಲ ಹಂತದಲ್ಲಿ 2017 ಡಿಸೆಂಬರ್ 31ರವರೆಗೆ ರೈತರು ಮಾಡಿದ ಎಲ್ಲಾ ಸುಸ್ತಿ ಬೆಳೆ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡಲು ತೀರ್ಮಾನಿಸಿದ್ದಾರೆ. ರೈತರ ಸಾಲ ಮನ್ನಾದಿಂದ 34 ಸಾವಿರ ಕೋಟಿ ಸಮ್ಮಿಶ್ರ ಸರ್ಕಾರಕ್ಕೆ ಹೊರೆಯಾಗಲಿದೆ. ಇದರಿಂದ ರೈತರಿಗೆ ಸುಮಾರು 40 ಲಕ್ಷ ಸಾಲ ಮನ್ನಾದ ಪ್ರಯೋಜನವಾಗಿದೆ. ಅಕ್ಟೋಬರ್ 30, 2018 ಒಳಗೆ ಪೂರ್ತಿ ತೆರಿಗೆ ಪಾವತಿಸುವವರಿಗೆ ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡಲಾಗುವುದು.
ಇನ್ನು ಸಕಾಲದಲ್ಲಿ ಸಾಲ ಪಾವತಿಸಿರುವ ರೈತರಿಗೆ 25 ಸಾವಿರ ನಗದು ವಾಪಸ್ ಕೊಡಲಾಗುವುದು. ಅಷ್ಟೇ ಅಲ್ಲದೇ ರೈತರಿಗೆ ಹೊಸ ಸಾಲ ನೀಡಲು 6 ಸಾವಿರ ಕೋಟಿ ನಿಗದಿ ಮಾಡಲಾಗಿದೆ. ಆದರೆ 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವ ರೈತರ ಸಾಲ ಮತ್ತು ಇತರೆ ಅನರ್ಹ ಕೃಷಿ ಸಾಲಗಾರರ ಸಾಲ ಮನ್ನಾ ಕೂಡ ಇಲ್ಲವಾಗಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರಿ ಕ್ಷೇತ್ರಗಳ ಅಧಿಕಾರಿ ಕುಟುಂಬಗಳ ಸಾಲ ಮನ್ನಾ ಮಾಡಿಲ್ಲ.