ಬೆಂಗಳೂರು: ಪವರ್ ಶೇರ್ (Power Sharing) ವಿಚಾರದಲ್ಲಿ ಸ್ವಾಮೀಜಿಗಳ ಮಧ್ಯಪ್ರವೇಶ ಬಗ್ಗೆ ಹಗ್ಗಜಗ್ಗಾಟ ಮುಂದುವರೆದಿದೆ. ಡಿಕೆಶಿ ಪರ ನಿರ್ಮಲಾನಂದನಾಥ ಶ್ರೀಗಳು ಮಾತಾಡಿದ್ದು, ಒಕ್ಕಲಿಗ ನಾಯಕರಲ್ಲೇ ಪರ ವಿರೋಧಕ್ಕೆ ವೇದಿಕೆ ಒದಗಿಸಿದೆ.
ಕಾಂಗ್ರೆಸ್ ಪವರ್ ಪಾಲಿಟಿಕ್ಸ್‌ನಲ್ಲಿ ಈಗಾಗಲೇ ಕೆಲ ಹಿರಿಯ ಸ್ವಾಮೀಜಿಗಳ ರಂಗಪ್ರವೇಶವಾಗಿದೆ. ಚುಂಚಶ್ರೀಗಳ ಹೇಳಿಕೆ ಈಗ ಒಕ್ಕಲಿಗ ನಾಯಕರಲ್ಲಿ ಪರವಿರೋಧ ಕಿಡಿ ಹೊತ್ತಿಸಿದೆ. ರಾಜಕಾರಣದಲ್ಲಿ ಸ್ವಾಮೀಜಿಗಳ ಮಧ್ಯಪ್ರವೇಶ ಅನಗತ್ಯ ಅಂದಿದ್ದ ಕೇಂದ್ರ ಸಚಿವ ಹೆಚ್‌ಡಿಕೆಗೆ (HD Kumaraswamy) ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ಟಕ್ಕರ್ ಕೊಟ್ಟಿದ್ದಾರೆ. ನಾನು ರಾಜಕೀಯಕ್ಕೆ ಹೊಸದಾಗಿ ಬಂದ ವೇಳೆ ಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಚೆನ್ನಾರೆಡ್ಡಿ ಆಯೋಗದ ವಿರುದ್ಧ ಹೋರಾಟ ಆಯಿತು. ಆ ಹೋರಾಟ ಮಾಡಿದ್ದೇ ದೇವೇಗೌಡರನ್ನು ಸಿಎಂ ಮಾಡಲು. ಆಗ ದೇವೇಗೌಡರು ಮುಖ್ಯಮಂತ್ರಿಯಾದರು. ಈಗ ಅದೇ ಶ್ರೀಗಳ ಬಗ್ಗೆ ಹೆಚ್‌ಡಿಕೆ ಚಿಲ್ಲರೆ ಹೇಳಿಕೆ ನೀಡುವುದನ್ನು ಬಿಡಬೇಕು. ಕುಮಾರಸ್ವಾಮಿ ಏನು ಸ್ವಯಂ ಘೋಷಿತ ದೇವಮಾನವರಾ ಅಂತ ಬಾಲಕೃಷ್ಣ ಟಾಂಗ್ ಕೊಟ್ಟರು. ಇದನ್ನೂ ಓದಿ: ರೀಲ್ಸ್ ನೋಡುತ್ತಾ ಮಗುವನ್ನೇ ಮರೆತ ತಾಯಿ – ರಾತ್ರಿ ಇಡೀ ತೋಟದಲ್ಲಿದ್ದ ಕಂದನನ್ನು ಪತ್ತೆ ಮಾಡಿದ ಶ್ವಾನ!
ಶ್ರೀಗಳ ಹೇಳಿಕೆಗೆ ಮೊನ್ನೆ ಶನಿವಾರ ಹೆಚ್‌ಡಿಕೆ ಮಾತನಾಡಿ, ಸ್ವಾಮೀಜಿಗಳು ಧರ್ಮ ರಕ್ಷಣೆ ಮಾಡಬೇಕು, ರಾಜಕೀಯದಲ್ಲಿ ಮಧ್ಯಪ್ರವೇಶ ಅನಗತ್ಯ ಅಂದಿದ್ದರು. ಇದಕ್ಕೆ ಡಿಕೆಶಿ, ಒಕ್ಕಲಿಗರ ಎರಡನೇ ಮಠ ಹೇಗಾಯ್ತು? ಒಕ್ಕಲಿಗ ಮಠದ ಹಿರಿಯ ಶ್ರೀಗಳು ಇಲ್ಲದಿದ್ದಿದ್ರೆ ದೇವೇಗೌಡ್ರು ಸಿಎಂ ಆಗ್ತಿದ್ರಾ ಅಂತ ಪ್ರಶ್ನಿಸಿದ್ದರು. ಇದನ್ನೂ ಓದಿ: ಇಂದಿನಿಂದ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ: ಗ್ರಾಮ ಪಂಚಾಯತ್‌ನಲ್ಲೇ 11ಬಿ ಖಾತೆ ವಿತರಣೆ, ನೋಂದಣಿ ಪುನಾರಂಭ
ಇನ್ನು ಇದೇ ವೇಳೆ ಸ್ವಾಮೀಜಿಗಳ ಮಧ್ಯಪ್ರವೇಶ ವಿಚಾರ ಬಗ್ಗೆ ವಿಶ್ವ ಒಕ್ಕಲಿಗರ ಮಠ ನಿಶ್ಚಲಾನಂದ ಸ್ಚಾಮೀಜಿ ಸ್ಪಷ್ಟನೆ ಕೊಟ್ಟಿದ್ದಾರೆ. ನಾವು ಸ್ವಾಮೀಜಿಗಳು ಧಾರ್ಮಿಕ ಮುಖಂಡರು ರಾಜಕೀಯವಾಗಿ ಮಾತಾನಾಡಬಾರದು. ಆದರೆ ವಾಸ್ತವಿಕವಾಗಿ ಯೋಜನೆ ಮಾಡಿದಾಗ ಒಬ್ಬರು ಸಮುದಾಯದ ವ್ಯಕ್ತಿ ಪಕ್ಷಕ್ಕಾಗಿ ದುಡಿದಿದ್ದಾರೆ. ಹೀಗಾಗಿ ಭಕ್ತ ಸಮುದಾಯದಲ್ಲಿ ಆಕ್ರೋಶ ಕೇಳಿ ಬಂತು. ಡಿಕೆಶಿ ಅವರಿಗೆ ಅವಕಾಶ ಕೊಡಿ ಅಂತಾ ಕೇಳಿದ್ವಿ. ರಾಜಕೀಯ ಹಸ್ತಕ್ಷೇಪ ನಾವು ಸಾಮಾನ್ಯವಾಗಿ ಮಾಡಲ್ಲ. ಹೈಕಮಾಂಡ್‌ಗೆ ಅಷ್ಟೇ ನಾವು ಕೇಳಿಕೊಂಡಿದ್ದು. ದಯವಿಟ್ಟು ಮಾತಾನಾಡಿ ಅಂತಾ ಭಕ್ತರು ಕೇಳಿಕೊಂಡರು. ಹೀಗಾಗಿ ನಾವು ಮಧ್ಯಪ್ರವೇಶ ಮಾಡಿದ್ದು. ನಾವು ಯಾವ ಪಕ್ಷದ ವಿರುದ್ಧವೂ ಅಲ್ಲ ಯಾವ ಪಕ್ಷದ ಪರವೂ ಇಲ್ಲ. ಡಿಕೆಗೆ ಅವಕಾಶ ಕೊಡಿ ಅಂತಾ ಕೇಳಿದ್ವಿ ಅಷ್ಟೇ. ಈಗ ಸಿಎಂ ಡಿಸಿಎಂ ಏನೋ ಅವರವರ ಮಧ್ಯೆ ಬಗೆಹರಿಸಿಕೊಂಡಿದ್ದಾರೆ. ಹೀಗಾಗಿ ಇನ್ನು ಈ ಬಗ್ಗೆ ಮಾತಾನಾಡಲ್ಲ ಎಂದರು. ಇದನ್ನೂ ಓದಿ: ಇ-ಸ್ಟ್ಯಾಂಪ್‌ಗೆ ಗುಡ್ ಬೈ – ಇನ್ಮುಂದೆ ಕರ್ನಾಟಕದಲ್ಲಿ ಡಿಜಿಟಲ್ ಇ-ಸ್ಟ್ಯಾಂಪ್
ಕೈ ಪಾಳಯದಲ್ಲಿ ಪವರ್ ವಾರ್ ಕೊಂಚ ತಣ್ಣಗಾಗಿದ್ರೆ ಸ್ವಾಮೀಜಿ ಎಂಟ್ರಿ ವಿಚಾರದಲ್ಲಿ ಒಕ್ಕಲಿಗ ನಾಯಕರಲ್ಲೇ ಕಿಡಿ ಹತ್ತಿಕೊಂಡಿದೆ. ಖುದ್ದು ಸ್ವಾಮೀಜಿಗಳೇ ಮತ್ತೆ ಸ್ಪಷ್ಟೀಕರಣ ಕೊಡುತ್ತಾರಾ ಎಂಬ ಕುತೂಹಲ ಇದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ, ಸಿದ್ದರಾಮಯ್ಯ ಓಬಿಸಿ ನಾಯಕರಲ್ಲ: ಅರವಿಂದ ಬೆಲ್ಲದ್ ಚಾಟಿ

