– ಮುನಿರತ್ನ ಪ್ರಕರಣಗಳನ್ನ ಎಸ್‌ಐಟಿಗೆ ವಹಿಸಲು ಒತ್ತಾಯ
ಬೆಂಗಳೂರು: ಮುನಿರತ್ನ (Munirathna) ವಿರುದ್ಧದ ಪ್ರಕರಣಗಳನ್ನ SITಗೆ (ವಿಶೇಷ ತನಿಖಾ ತಂಡ) ವಹಿಸುವಂತೆ ಒಕ್ಕಲಿಗ ಸಚಿವರು, ಶಾಸಕರ ನಿಯೋಗ ಮನವಿ ಸಲ್ಲಿಸಿದೆ. ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾ ಒಕ್ಕಲಿಗ ಸಚಿವರು (Vokkaliga Ministers), ಶಾಸಕರ ನಿಯೋಗ ಮನವಿ ಸಲ್ಲಿಸಿದೆ. ಸಚಿವ ಚಲುವರಾಯಸ್ವಾಮಿ ಸಚಿವ ಕೃಷ್ಣಬೈರೇಗೌಡ, ಸಚಿವ ಸುಧಾಕರ್, ಶಾಸಕ ಶರತ್ ಬಚ್ಚೇಗೌಡ, ಕುಣಿಗಲ್ ರಂಗನಾಥ್ ಸೇರಿ ಹಲವರು ನಿಯೋಗದಲ್ಲಿ ಇದ್ದರು.
Advertisement
ಇದೇ ವೇಳೆ ಮಾಜಿ ಸಿಎಂ ಹೆಚ್‌ಡಿಕೆ (HD Kumaraswamy) ವಿರುದ್ಧವೂ ಎಸ್‌ಐಟಿ ಅಸ್ತ್ರ ಪ್ರಯೋಗಕ್ಕೆ ಪ್ಲ್ಯಾನ್ ಮಾಡಿದ್ದು, ಸಿಎಂ ಭೇಟಿ ವೇಳೆ ಹೆಚ್‌ಡಿಕೆ ವಿರುದ್ಧವೂ ಎಸ್‌ಐಟಿ ತನಿಖೆಗೆ ಒಕ್ಕಲಿಗ ಸಚಿವರು, ಶಾಸಕರ ನಿಯೋಗ ಮನವಿ ಮಾಡಿದೆ. ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ನಿನ್ನೆ ರಾತ್ರಿ ಶಾಸಕರು, ಮುಂಖಂಡರು ಸಭೆ ಮಾಡಿದ್ವಿ. ಮತ್ತೊಂದು ಸಭೆ ಮಾಡಲು ತೀರ್ಮಾನ ಮಾಡಿದ್ದೇವೆ. ಬಿಜೆಪಿ, ಜೆಡಿಎಸ್ ಒಕ್ಕಲಿಗ ನಾಯಕರು ಶಾಸಕ ಮುನಿರತ್ನ ಪರ ನಿಂತಿದ್ದಾರೆ. ಇದು ನಮಗೆ ಬಹಳ ನೋವು ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದಾಗಲೇ BMTC ಬಸ್ ಚಾಲಕನಿಗೆ ಹೃದಯಾಘಾತ – ಟ್ರಾಫಿಕ್ ಪೊಲೀಸರ ಸಮಯ ಪ್ರಜ್ಞೆಯಿಂದ ಬಚಾವ್!
Advertisement
Advertisement
ಸಮಾಜದ ಪರ ನಿಲ್ಲದೇ ಇರೋದಕ್ಕೆ ನೋವು ತಂದಿದೆ. ಇದನ್ನು ಜನರ ಬಳಿ ತೆಗೆದುಕೊಂಡು ಹೋಗಬೇಕು ಅಂತೇಳಿದ್ರು. ಮುನಿರತ್ನ ವಿರುದ್ಧ ಕೂಡ ಎಸ್‌ಐಟಿ ತನಿಖೆಯಾಗಬೇಕು. ಈ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇವೆ. ಈಗ ಒಳ್ಳೆಯ ಕೆಲಸಕ್ಕಿಂತ ತನಿಖೆಯಾಗುವುದು ಬಹಳ ಮುಖ್ಯ. ಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಹೋರಾಟ ಮಾಡಲು ಚಿಂತನೆ ನಡೆಸಿದ್ದೇವೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಹಿಜ್ಬುಲ್ಲಾದ 100 ರಾಕೆಟ್ ಲಾಂಚರ್ ಉಡೀಸ್ – ಪ್ರತೀಕಾರದ ದಾಳಿಗೂ ಮುನ್ನವೇ ಪೆಟ್ಟುಕೊಟ್ಟ ಇಸ್ರೇಲ್
Advertisement
ಇನ್ನು ಬಿಜೆಪಿ, ಜೆಡಿಎಸ್ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಯಡಿಯೂರಪ್ಪ, ಕುಮಾರಸ್ವಾಮಿ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಆರೋಪ ಮಾಡಿದ್ದೇವೆ. ಸಿಎಂ ಭೇಟಿ ವೇಳೆ ಹೆಚ್.ಡಿ ಕುಮಾರಸ್ವಾಮಿ ವಿರುದ್ಧವೂ ತನಿಖೆಗೆ ಎಸ್‌ಐಟಿ ರಚಿಸುವಂತೆ ಮನವಿ ಮಾಡಿದ್ದೇವೆ ಅಂತಾ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: Davanagere Violence | ಕಲ್ಲು ತೂರಾಟ – ಗಣೇಶ ಸಮಿತಿ 8 ಜನ ಸೇರಿ 18 ಮಂದಿಗೆ ನ್ಯಾಯಾಂಗ ಬಂಧನ