ಮೈಸೂರು: ಆದಿ ಚುಂಚನಗಿರಿ ಶ್ರೀಗಳು ಡಿ.ಕೆ ಶಿವಕುಮಾರ್ (DK Shivakumar) ಸಿಎಂ ಆಗವಬೇಕು ಎಂದು ಹೇಳಿಕೆ ಕೊಟ್ಟ ಬೆನ್ನಲ್ಲೇ ಒಕ್ಕಲಿಗರ ಸಂಘ ಅಲರ್ಟ್ ಆಗಿ ಸ್ವಾಮೀಜಿಗಳ ಧ್ವನಿಗೆ ದನಿ ಗೂಡಿಸಿದ್ದಾರೆ.

ಸಿಎಂ ತವರಿನಲ್ಲಿ ಒಕ್ಕಲಿಗ ಸಮುದಾಯದ (Vokkaliga Community) ಮುಖಂಡರು ಡಿ.ಕೆ ಶಿವಕುಮಾರ್ ಪರವಾಗಿ ಧ್ವನಿ ಜೋರು ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಪರವಾಗಿ ಒಕ್ಕಲಿಗ ಸಮುದಾಯದ ಮುಖಂಡರು ಫೀಲ್ಡಿಗಿಳಿದಿದ್ದು ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ ಡಿಕೆಶಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಜೆಟ್‌ವರೆಗೆ ಟೈಂ ಕೇಳ್ತಾರಾ ಸಿದ್ದರಾಮಯ್ಯ? ಸಂಕ್ರಾಂತಿಯೊಳಗೆ ಇತ್ಯರ್ಥಕ್ಕೆ ಡಿಕೆ ಪಟ್ಟು!
ಮೈಸೂರು ಒಕ್ಕಲಿಗರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಒಕ್ಕಲಿಗ ಮುಖಂಡರ ಸಭೆ ನಡೆಸಿದ್ದು ಸಭೆಯಲ್ಲಿ 50ಕ್ಕೂ ಹೆಚ್ಚು ಒಕ್ಕಲಿಗ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಜೆಡಿಎಸ್ ಬಿಜೆಪಿ-ಕಾಂಗ್ರೆಸ್ (BJP-Congress) ಪಕ್ಷದ ಒಕ್ಕಲಿಗ ಮುಖಂಡರು ಇದ್ದರು. ಡಿ.ಕೆ ಶಿವಕುಮಾರ್‌ಗೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಬೇಕು.
ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಟ್ಟರೆ ಒಕ್ಕಲಿಗ ಸಮುದಾಯ ಸಿದ್ದರಾಮಯ್ಯ ಅವರನ್ನ ಗೌರವಿಸುತ್ತದೆ. ಡಿಕೆಶಿಗೆ ಅನ್ಯಾಯ ಆದ್ರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಬಂಗಾರದ ತೀರ್ಥ ಮಂಟಪ ಉದ್ಘಾಟನೆ, ಭಗವದ್ಗೀತೆಯ 10 ಶ್ಲೋಕ ಪಠಣ – ಉಡುಪಿಯಲ್ಲಿಂದು ಹತ್ತಾರು ವಿಶೇಷ!

