2 ಗಂಟೆ ವೊಡಾಫೋನ್ ನೆಟ್‍ವರ್ಕ್ ಡೌನ್ – ಬಳಕೆದಾರರ ಆಕ್ರೋಶ

Public TV
1 Min Read
vodafone B

ಬೆಂಗಳೂರು: ವೊಡಾಫೋನ್ ನೆಟ್‍ವರ್ಕ್ ಸರಿಯಾಗಿ ಸಿಗುತ್ತಿಲ್ಲ ಎಂಬ ದೂರಿನ ಮಧ್ಯೆ ಇಂದು ಮಧ್ಯಾಹ್ನ ಸುಮಾರು 2 ಗಂಟೆಗಳ ಕಾಲ ವೊಡಾಫೋನ್ ನೆಟ್‍ವರ್ಕ್ ಡೌನ್ ಆಗಿತ್ತು.

ಬೆಂಗಳೂರು ಮಾತ್ರವಲ್ಲ ರಾಜ್ಯದ ಹಲವೆಡೆ ವೊಡಾಫೋನ್ ನೆಟ್‍ವರ್ಕ್ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಡೌನ್ ಆಗಿತ್ತು. ಡೌನ್ ಆದ ವಿಚಾರ ತಿಳಿಯುತ್ತಿದ್ದಂತೆ ಮೊಬೈಲ್‍ನಲ್ಲಿ ಕರೆನ್ಸಿ, ಡೇಟಾ ಪ್ಯಾಕ್ ಇದ್ದರೂ ಯಾವುದೇ ಪ್ರಯೋಜನವಾಗ್ತಿಲ್ಲ ಎಂದು ಕಂಪನಿಯನ್ನು ಬಳಕೆದಾರರು ದೂರಲು ಆರಂಭಿಸಿದರು.

https://twitter.com/VodafoneIN/status/1225739534106681344

ಕರ್ನಾಟಕದಲ್ಲಿ ನಮ್ಮ ನೆಟ್‍ವರ್ಕ್ ಸಮಸ್ಯೆಯಾಗಿದೆ. ನಾವು ಇದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯುತ್ತೆ, ಸಹಕರಿಸಿ ಎಂದು ಮನವಿ ಮಾಡಿ ವೊಡಾಫೋನ್ ಕಂಪನಿ ಬಳಕೆದಾರರಿಗೆ ಮೆಸೆಜ್ ಕಳುಹಿಸಿತ್ತು.

https://twitter.com/VodafoneIN/status/1225731629529722881

ಬಳಕೆದಾರರ ದೂರುಗಳಿಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ, ಇದು ತಾತ್ಕಾಲಿಕ ಸಮಸ್ಯೆ. ಇದನ್ನು ನಾವು ಸರಿಪಡಿಸುತ್ತಿದ್ದೇವೆ. ದಯಮಾಡಿ ನಮಗೆ ಸಮಯ ಕೊಡಿ, ಸಮಸ್ಯೆ ಬಗೆಹರಿಸುತ್ತಿದ್ದೇವೆ ಎಂದಿದೆ.

https://twitter.com/VodafoneIN/status/1225737986429472771

ಅಷ್ಟೇ ಅಲ್ಲದೆ ಪದೇ ಪದೇ ನೆಟ್‍ವರ್ಕ್ ಡೌನ್ ಆಗುತ್ತಿರುವುದಕ್ಕೆ ನೆಟ್ಟಿಗರು ವೊಡಾಫೋನ್ ಕಂಪನಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಮಾಡಿ, ಕಾಲೆಳೆಯುತ್ತಿದ್ದಾರೆ.

ಹೆಚ್ಚು ಬಳಕೆದಾರರನ್ನು ಹೊಂದಿರುವ ಟೆಲಿಕಾಮ್ ನೆಟ್‍ವರ್ಕ್‍ಗಳಲ್ಲಿ ವೊಡಾಫೋನ್ ಕೂಡ ಒಂದು. ಭಾರತದಲ್ಲಿ ವೊಡಾಫೋನ್ ಸುಮಾರು 200 ಮಿಲಿಯನ್ ಸಬ್‍ಸ್ಕ್ರೈರ್ಸ್ ಹೊಂದಿದೆ. ಆದ್ದರಿಂದ ಬಳಕೆದಾರರು ಟಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್‍ವರ್ಕ್ ಡೌನ್ ಆಗಿರುವ ಬಗ್ಗೆ ದೂರುತ್ತಿದ್ದಾರೆ.

ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್) ಬಿಡುಗಡೆ ಮಾಡಿದ ವರದಿ ಪ್ರಕಾರ ದೇಶದಲ್ಲಿ ವೊಡಾಫೋನ್ 37.24 ಕೋಟಿ, ರಿಲಯನ್ಸ್ ಜಿಯೋ 35.52 ಕೋಟಿ, ಏರ್‍ಟೆಲ್ 32.55 ಕೋಟಿ, ಬಿಎಸ್‍ಎನ್‍ಎಲ್ 11.69 ಕೋಟಿ ಹಾಗೂ ಎಂಟಿಎನ್‍ಎಲ್ 33.93 ಲಕ್ಷ ಗ್ರಾಹಕರನ್ನು ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *