ಮಂಗಳೂರು: ವೊಡಾಫೋನ್ ಕಂಪನಿ ತನ್ನ ಗ್ರಾಹಕನೊಬ್ಬನಿಗೆ ಐದು ಪೈಸೆಯನ್ನು ಚೆಕ್ ನೀಡುವ ಮೂಲಕ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನಿವಾಸಿಯಾದ, ಸದ್ಯ ಮುಂಬೈನಲ್ಲಿ ನೆಲೆಸಿರುವ ಮೊಯಿದ್ದೀನ್ ಶರೀಫ್ ಎಂಬವರು ಕಳೆದ 15 ವರ್ಷಗಳಿಂದ ವೊಡಾಫೋನ್ ಸಿಮ್ ಬಳಸುತ್ತಿದ್ದರು. ಒಂದು ವರ್ಷದ ಹಿಂದೆ ರೋಮಿಂಗ್ ಚಾರ್ಚ್ ಎಂದು 75 ರೂಪಾಯಿ ಪ್ಲಾನ್ ತೆಗೆದುಕೊಂಡಿದ್ದರು. ಆದರೆ ಕಸ್ಟಮರ್ ಕೇರ್‍ನಲ್ಲಿ ತಪ್ಪು ನಮೂದಿಸಿದ್ದರಿಂದ ಅವರಿಗೆ ನಾಲ್ಕು ಸಾವಿರ ರೂ. ಬಿಲ್ ಬಂದಿತ್ತು.
Advertisement
Advertisement
ಶರೀಫ್ ಅವರಿಗೆ ನಂಬರ್ ಅಗತ್ಯ ಇದ್ದಿದ್ರಿಂದ ನಾಲ್ಕು ಸಾವಿರ ರೂಪಾಯಿಯ ಪೋಸ್ಟ್ ಪೇಯ್ಡ್ ಬಿಲ್ ಹಣವನ್ನ ಪಾವತಿಸಿದ್ದರು. ಆ ಬಳಿಕ ಅವರು ತನ್ನ ನಂಬರನ್ನು ರಿಲಯನ್ಸ್ ಕಂಪನಿಗೆ ಪೋರ್ಟ್ ಮಾಡಿದ್ದು, ಇತ್ತೀಚೆಗೆ ಏರ್‍ಟೆಲ್ ಕಂಪನಿಗೆ ಪೋರ್ಟ್ ಮಾಡಿದ್ರು. ಇದೀಗ ಅವರಿಗೆ ವೊಡಾಫೋನ್ ಕಂಪನಿಯಿಂದ ಪತ್ರ ಹಾಗೂ ಬಿಲ್‍ನ ಉಳಿದಿರುವ ಮೊತ್ತ ಎಂದು ಐದು ಪೈಸೆಯ ಚೆಕ್ ಬಂದಿದೆ.
Advertisement
Advertisement
ಇದು ಸಿಟಿ ಬ್ಯಾಂಕ್ ಕಂಪನಿಯ ಚೆಕ್. ವಿಶೇಷ ಅಂದರೆ 5 ಪೈಸೆ ಚಲಾವಣೆ ಇಲ್ಲದಿದ್ದರೂ ಸರ್ಕಾರ ಅದನ್ನು ಹಿಂದಕ್ಕೆ ಪಡೆದಿಲ್ಲ. ಬ್ಯಾಂಕಿನಲ್ಲಿ 50 ಪೈಸೆಗಿಂತ ಕಡಿಮೆ ಮೌಲ್ಯವನ್ನು ನಮೂದಿಸೋದಿಲ್ಲ. ಐವತ್ತು ಪೈಸೆಗಿಂತ ಹೆಚ್ಚಿನ ಮೊತ್ತವನ್ನು ಒಂದು ರೂಪಾಯಿ ಎಂದು ಪರಿಗಣಿಸಲು ರಿಸರ್ವ್ ಬ್ಯಾಂಕ್ ಅದೇಶ ಇದೆ. ಹೀಗಿದ್ದರೂ ವೊಡಾಫೋನ್ ಸಂಸ್ಥೆ ಐದು ಪೈಸೆಯ ಚೆಕ್ ನೀಡಿದ್ದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.
ಅದರಲ್ಲೂ ವಿಶೇಷ ಏನೇಂದರೆ ವೊಡಾಫೋನ್ ಕಂಪೆನಿ 5 ಪೈಸೆಗಾಗಿ 50 ರೂಪಾಯಿಯವರೆಗೂ ಖರ್ಚು ಮಾಡಿದೆ.