ಸಹಸ್ರಾರು ಭಕ್ತಿ ಗೀತೆಗಳನ್ನು ಭಕ್ತಿ ಪರವಶತೆಯಿಂದ ಹಾಡಿ ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಶ್ರೀ ವಿದ್ಯಾಭೂಷಣ್ (Vocalist Vidyabhushana) ಅವರು ಸಾಹಿತ್ಯ ಅಕಾಡಮಿ ಪುರಸ್ಕೃತ ಸಾಹಿತಿ-ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ `ಆದಿ ಮಹಾ ಶಕ್ತಿ ಮಹಾಮಾಯಿಯೇ…’ ಎನ್ನುವ ಹಾಡನ್ನು ಪ್ರಪ್ರಥಮ ಬಾರಿಗೆ ಸಿನಿಮಾಕ್ಕಾಗಿ ಹಾಡಿದ್ದಾರೆ.
ಕನಕದಾಸ, ಪುರಂದರದಾಸ, ತ್ಯಾಗರಾಜ…ಇಂತಹ ದಾಸ ಶ್ರೇಷ್ಠರ, ಋಷಿ-ಮುನಿಗಳ ಸಹಸ್ರಾರು ಭಕ್ತಿಗೀತೆಗಳನ್ನು ಹಾಡಿರುವ ವಿದ್ಯಾಭೂಷಣ್ ಅವರು ಭಕ್ತಿ ಸಾಹಿತ್ಯ ಮೆಚ್ಚಿ ಹಾಡಿರುವುದು ಧನ್ಯತಾ ಭಾವ ಮೂಡಿಸಿದೆ ಎಂದು ಗೀತೆ ರಚನೆಕಾರ ಸುಧೀರ್ ತಿಳಿಸಿರುತ್ತಾರೆ. ಇದನ್ನೂ ಓದಿ: ಸಿನಿಮಾ ಆಯ್ತು ವೈರಲ್ ಆಗಿದ್ದ `ಅಮೃತಾಂಜನ್’ ಶಾರ್ಟ್ ಫಿಲ್ಮ್
ಮಹಾಮಯಿ ಯಶೋದೆಯ ಮಗಳು. ಕೃಷ್ಣನನ್ನು ಉಳಿಸಲು ಕಂಸನಿಂದ ಶಿರಚ್ಛೇದಕ್ಕೊಳಗಾಗಿ, ಕೃಷ್ಣನನ್ನು ರಕ್ಷಿಸುವ ತಾತ್ಪರ್ಯವುಳ್ಳ ಈ ಹಾಡಿನಲ್ಲಿ ‘ಮಹಾಮಯಿ’ಯ ವರ್ಣನೆಯ ಅಂಶವಿದೆ. ಹಾಡಿನ ಲಿರಿಕಲ್ ಆಡಿಯೋ ಬಿಡುಗಡೆಯಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನವಿರುವ `ಪಿದಾಯಿ’ ಚಿತ್ರಕ್ಕಾಗಿ ಅವರು ಹಾಡಿದ್ದರೆ. ಈ ಸಿನಿಮಾವನ್ನು ರಮೇಶ್ ಶೆಟ್ಟಿಗಾರ್ ನಿರ್ಮಿಸಿರುತ್ತಾರೆ.