ಮಾಸ್ಕೋ: ಪ್ರಧಾನಿ ಮೋದಿ ಅವರು ಇರುವಾಗ ಭಾರತದ ವಿರುದ್ಧ ಮತ್ತು ಭಾರತೀಯರ ವಿರುದ್ಧ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಹುದು ಅಥವಾ ಪ್ರಧಾನಿ ಮೋದಿ (Narendra Modi) ಅವರನ್ನ ಹೆದರಿಸಬಹುದು ಅಂತ ಊಹಿಸೋದಕ್ಕೂ ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹಾಡಿ ಹೊಗಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಪುಟಿನ್ ಮೋದಿ ನೀತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಭದ್ರತೆ National Security) ವಿಚಾರದಲ್ಲಿ ಮೋದಿ ಅವರು ತೆಗೆದುಕೊಳ್ಳುವ ಕಠಿಣ ನಿಲುವುಗಳು ನನಗೆ ಆಗಾಗ್ಗೆ ಅಚ್ಚರಿಯನ್ನುಂಟುಮಾಡುತ್ತದೆ. ದೇಶದ ಜನರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಭಾರತದ ಪ್ರಧಾನಿ ಕಠಿಣ ನಿಲುವು ತೆಗೆದುಕೊಳ್ಳುತ್ತಾರೆ. ಮೋದಿ ಅವರ ನೀತಿಯು ದೆಹಲಿ ಮತ್ತು ಮಾಸ್ಕೋ (Moscow) ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದೆ ಎಂದು ಒತ್ತಿ ಹೇಳಿದ್ದಾರೆ.
ಮೋದಿ ಅವರು ಹೊರಗಿನಿಂದ ಏನಾಗುತ್ತಿದೆ ಎಂಬುದನ್ನೆಲ್ಲಾ ನಿರಂತರವಾಗಿ ಗಮನಿಸುತ್ತಿದ್ದಾರೆ. ಇತ್ತೀಚೆಗೆ ರಷ್ಯಾ-ಚೀನಾ ಸಂಬಂಧಗಳು ನಿರಂತರವಾಗಿ ಎಲ್ಲಾ ದಿಕ್ಕುಗಳಲ್ಲೂ ಅಭಿವೃದ್ಧಿಯತ್ತ ಸಾಗುತ್ತಿದೆ. ಇದಕ್ಕೆ ಮೋದಿ ಅವರ ನೀತಿಯೂ ಮುಖ್ಯ ಕಾರಣವಾಗಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಜೊತೆ ಗುಂಡಿನ ಚಕಮಕಿ; ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು
ಇತ್ತೀಚೆಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪುಟಿನ್ ವರ್ಚುವಲ್‌ನಲ್ಲಿ ಪಾಲ್ಗೊಂಡು ಧನ್ಯವಾದ ಅರ್ಪಿಸಿದ್ದರು. ಇದನ್ನೂ ಓದಿ: ಇದು ಯುದ್ಧದ ಸಮಯವಲ್ಲ – ಪುಟಿನ್‌ಗೆ ಪ್ರಧಾನಿ ಮೋದಿ ಸಲಹೆ
ಈ ಹಿಂದೆ ಮೋದಿ ರಷ್ಯಾ ಭೇಟಿ ನೀಡಿದಾಗ ಹಾಗೂ ವರ್ಚುವಲ್ ಸಮಾರಂಭಗಳಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಉಲ್ಲೇಖಿಸಿ, ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಯುದ್ಧವನ್ನು ನಿಲ್ಲಿಸುವಂತೆಯೂ ಮೋದಿ ಮನವಿ ಮಾಡಿದ್ದರು.