ಮಾಸ್ಕೋ: ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಕಟ್ಟಡದ 16 ಮಹಡಿಯಿಂದ ಕೆಳಗೆ ಬಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಆಪ್ತೆ ಹಾಗೂ ರಷ್ಯಾದ (Russia) ರಕ್ಷಣಾ ಸಚಿವಾಲಯದ ಹಣಕಾಸು ಬೆಂಬಲ ವಿಭಾಗದ ಮುಖ್ಯಸ್ಥೆ ಮರೀನಾ ಯಾಂಕಿನಾ (Marina Yankina) ಸಾವನ್ನಪ್ಪಿದ್ದಾರೆ.
ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸೇಂಟ್ ಪೀಟರ್ಸ್ಬರ್ಗ್ನ ಕಲಿನಿನ್ಸ್ಕಿ ಪ್ರದೇಶದ ವಸತಿ ಸಂಕೀರ್ಣದ ಪಾದಚಾರಿ ಮಾರ್ಗದಲ್ಲಿ ಮರೀನಾ ಯಾಂಕಿನಾ (58) ಅವರ ಮೃತದೇಹ ಕಂಡು ನೆರೆಹೊರೆಯವರು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಕಿಮ್ ಜಾಂಗ್ ಉನ್ ಮಗಳ ಹೆಸರನ್ನು ಉತ್ತರ ಕೊರಿಯಾದ ಯಾರೂ ತಮ್ಮ ಮಕ್ಕಳಿಗೆ ಇಡುವಂತಿಲ್ಲ!
Advertisement
Advertisement
ಉಕ್ರೇನ್ ವಿರುದ್ಧ ಪುಟಿನ್ ಸಾರಿದ ಯುದ್ಧಕ್ಕೆ ಹಣಕಾಸು ನಿರ್ವಹಿಸುವಲ್ಲಿ ಮರೀನಾ ಪ್ರಮುಖ ಪಾತ್ರ ವಹಿಸಿದ್ದರು. ಅವರು ರಷ್ಯಾದ ಐದು ಭೌಗೋಳಿಕ ಬೆಟಾಲಿಯನ್ಗಳಲ್ಲಿ ಒಂದಾದ ವೆಸ್ಟರ್ನ್ ಮಿಲಿಟರಿ ಡಿಸ್ಟ್ರಿಕ್ಟ್ನ ಹಣಕಾಸು ನಿರ್ದೇಶಕರಾಗಿದ್ದರು.
Advertisement
Advertisement
ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ನಂತರ ರಷ್ಯಾದ ಅನೇಕ ಪ್ರಮುಖರು ಸಾವಿಗೀಡಾಗಿದ್ದಾರೆ. ಅವರ ಪೈಕಿ ಮರೀನಾ ಯಾಂಕಿನಾ ಕೂಡ ಒಬ್ಬರು. ಇತ್ತೀಚೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದ ವಜಾಗೊಂಡಿದ್ದ ರಷ್ಯಾದ ಜನರಲ್ ಮೇಜರ್ ಜನರಲ್ ವ್ಲಾಡಿಮಿರ್ ಮಕರೋವ್ ಅವರು ಅನುಮಾನಾಸ್ಪದ ಸಾವನ್ನಪ್ಪಿದ್ದರು. ಇದಾದ ಕೆಲವು ದಿನಗಳ ನಂತರ ಮರೀನಾ ಸಾವಿನ ಸುದ್ದಿ ವರದಿಯಾಗಿದೆ. ಇದನ್ನೂ ಓದಿ: Missile Traceː ರಷ್ಯಾದ 6 ಬಲೂನ್ಗಳನ್ನು ಹೊಡೆದುರುಳಿಸಿದ ಉಕ್ರೇನ್ ಸೇನೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k