ಮಾಸ್ಕೋ: ರಷ್ಯಾದ (Russia) ಮಹಿಳೆಯರು 8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕರೆ ನೀಡಿದ್ದಾರೆ.
ಮಾಸ್ಕೋದಲ್ಲಿ ನಡೆದ ವಿಶ್ವ ರಷ್ಯಾದ ಪೀಪಲ್ಸ್ ಕೌನ್ಸಿಲ್ ಉದ್ದೇಶಿಸಿ ಮಾತನಾಡಿದ ಪುಟಿನ್, ಮುಂಬರುವ ದಶಕಗಳಲ್ಲಿ ರಷ್ಯಾದ ಜನಸಂಖ್ಯೆ ಹೆಚ್ಚಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: COP28 Summit: ದುಬೈ ತೆರಳಿದ ಮೋದಿಗೆ ಅದ್ಧೂರಿ ಸ್ವಾಗತ – ಹಿಂದೂಸ್ತಾನ್ ಹಮಾರ ಎಂದ ಭಾರತೀಯರು
Advertisement
Advertisement
ರಷ್ಯಾದ ಜನನ ಪ್ರಮಾಣವು 1990 ರ ದಶಕದಿಂದ ಕುಸಿಯುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ದೇಶದಲ್ಲಿ 3,00,000 ಕ್ಕೂ ಹೆಚ್ಚು ಸಾವು-ನೋವುಗಳಾಗಿವೆ ಎಂದು ದಿ ಇಂಡಿಪೆಂಡೆಂಟ್ ವರದಿ ತಿಳಿಸಿದೆ.
Advertisement
ದೇಶದ ಅನೇಕ ಜನಾಂಗದವರು ನಾಲ್ಕು ಅಥವಾ ಐದಕ್ಕಿಂತ ಹೆಚ್ಚಿನ ಮಕ್ಕಳಿದ್ದ ಸುಭದ್ರ ಕುಟುಂಬ ವ್ಯವಸ್ಥೆ ಹೊಂದಿದ್ದರು. ನಮ್ಮ ಅಜ್ಜಿ, ಮುತ್ತಜ್ಜಿಯರು 7, 8 ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ನಾವು ನೆನೆಯಬೇಕು ಎಂದು ಪುಟಿನ್ ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿಗೆ 10 ತಿಂಗಳ ಮಗು ಬಲಿಯಾಗಿದೆ: ಹಮಾಸ್ ಆರೋಪ
Advertisement
ನಾವು ಈ ಅತ್ಯುತ್ತಮ ಸಂಪ್ರದಾಯಗಳನ್ನು ಸಂರಕ್ಷಿಸೋಣ, ಪುನರುಜ್ಜೀವನಗೊಳಿಸೋಣ. ದೊಡ್ಡ ಕುಟುಂಬಗಳು ರೂಢಿಯಾಗಬೇಕು. ಎಲ್ಲಾ ರಷ್ಯಾದ ಜನರಿಗೆ ಇದು ಜೀವನ ವಿಧಾನವಾಗಿದೆ. ಕುಟುಂಬವು ರಾಜ್ಯ ಮತ್ತು ಸಮಾಜದ ಅಡಿಪಾಯವಲ್ಲ. ಇದು ಆಧ್ಯಾತ್ಮಿಕ ವಿದ್ಯಮಾನವಾಗಿದೆ. ನೈತಿಕತೆಯ ಮೂಲವಾಗಿದೆ ಎಂದಿದ್ದಾರೆ.
ಮುಂಬರುವ ದಶಕಗಳಲ್ಲಿ ಮತ್ತು ಮುಂದಿನ ಪೀಳಿಗೆಗೆ ರಷ್ಯಾದ ಜನಸಂಖ್ಯೆ ಸಂರಕ್ಷಿಸುವುದು ಮತ್ತು ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಇದು ರಷ್ಯಾದ ಭವಿಷ್ಯ ಹಾಗೂ ಸಹಸ್ರಮಾನ, ಶಾಶ್ವತವಾದ ರಷ್ಯಾಕ್ಕಾಗಿ ಅಗತ್ಯ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಜಪಾನ್ ಕರಾವಳಿ ತೀರದಲ್ಲಿ ಅಮೆರಿಕ ಸೇನಾ ವಿಮಾನ ಪತನ – 8 ಸಿಬ್ಬಂದಿ ದುರ್ಮರಣ
ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪಶ್ಚಿಮ ವಿಧಿಸಿದ ನಿರ್ಬಂಧಗಳಿಂದಾಗಿ ರಷ್ಯಾವು ತೀವ್ರವಾದ ಉದ್ಯೋಗಿಗಳ ಕೊರತೆ ಮತ್ತು ಹೆಚ್ಚುತ್ತಿರುವ ಆರ್ಥಿಕ ಮಂದಗತಿಗೆ ಸಾಕ್ಷಿಯಾಗಿದೆ. ಜನವರಿ 1, 2023 ರಂದು ರಷ್ಯಾದ ಜನಸಂಖ್ಯೆಯು 14.64 ಕೋಟಿ ಇತ್ತು. ಪುಟಿನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೇಶದ ಜನಸಂಖ್ಯೆಯು 1990 ರ ಅಂಕಿ ಅಂಶಕ್ಕಿಂತ ಕಡಿಮೆಯಾಗಿದೆ.