ನವದೆಹಲಿ: ಎರಡು ದಿನಗಳ ಕಾಲ ಭಾರತದ ಪ್ರವಾಸ ಕೈಗೊಳ್ಳಲ್ಲಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ದೆಹಲಿ ಐಟಿಸಿ ಮೌರ್ಯ ಹೋಟೆಲಿನಲ್ಲಿ(ITC Maurya Hotel) ತಂಗಲಿದ್ದಾರೆ.
4,700 ಚದರ ಅಡಿ ‘ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್’ನಲ್ಲಿ ಪುಟಿನ್ ತಮ್ಮ ರಷ್ಯಾದ ನಿಯೋಗದಲ್ಲಿ ಇಂದು ತಂಗಲಿದ್ದಾರೆ. ವಿದೇಶದಿಂದ ಆಗಮಿಸಿವ ಗಣ್ಯರಿಗೆಂದೇ ಈ ವಿಶೇಷ ಸೂಟ್ ನಿರ್ಮಾಣ ಮಾಡಲಾಗಿದ್ದು ಈ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜೋ ಬೈಡನ್, ಬಿಲ್ ಕ್ಲಿಂಟನ್ ಸೇರಿದಂತೆ ಹಲವಾರು ಗಣ್ಯರು ಈ ಹೋಟೆಲಿನಲ್ಲಿ ತಂಗಿದ್ದರು. ಭಾರತ ಮತ್ತು ರಷ್ಯಾ ಭದ್ರತಾ ಏಜೆನ್ಸಿಗಳು ಈ ಹೋಟೆಲಿಗೆ ಈಗ ಭಾರೀ ಭದ್ರತೆ ಕಲ್ಪಿಸಿವೆ.
ರಷ್ಯಾದ ನಿಯೋಗವು ಪಕ್ಕದ ತಾಜ್ ಪ್ಯಾಲೇಸ್‌ನಲ್ಲಿಯೂ ಕೊಠಡಿಗಳನ್ನು ತೆಗೆದುಕೊಂಡಿದೆ. ತಾಜ್ ಪ್ಯಾಲೇಸ್, ತಾಜ್ ಮಹಲ್, ಒಬೆರಾಯ್, ಲೀಲಾ ಮತ್ತು ಮೌರ್ಯ ಸೇರಿದಂತೆ ಕೇಂದ್ರ ದೆಹಲಿಯಲ್ಲಿರುವ ಫೈವ್ ಸ್ಟಾರ್ ಹೋಟೆಲ್‌ಗಳ ಕೊಠಡಿಗಳು ಎಲ್ಲಾ ರೂಮ್‌ಗಳು ಬುಕ್ ಆಗಿವೆ. ಇದನ್ನೂ ಓದಿ: ಇಂದು ಪುಟಿನ್ ಭಾರತಕ್ಕೆ – ಐದು ಸ್ತರದ ರಕ್ಷಣೆ ಹೇಗಿರಲಿದೆ?
ಸೂಟ್ ವಿಶೇಷತೆ ಏನು?
ಅತಿ ಗಣ್ಯರಿಗೆಂದು ಚಂದ್ರಗುಪ್ತ ಸೂಟ್ ಮತ್ತು ಅಶೋಕ ಸೂಟ್ ವಿನ್ಯಾಸ ಮಾಡಲಾಗಿದೆ. ಖಾಸಗಿ ಜಿಮ್, ಖಾಸಗಿ ಜೋಡಿಗಳ ಸ್ಪಾ, ಬೆಳ್ಳಿಯ ಕಲಾಕೃತಿಗಳನ್ನು ಒಳಗೊಂಡಿದೆ.
ಮೌರ್ಯ ಸಾಮ್ರಾಜ್ಯದಿಂದ ಸ್ಫೂರ್ತಿ ಪಡೆದ ಅಲಂಕಾರದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಕೊಠಡಿಗೆ ರೆಸೆಪ್ಶನ್ ಜಾಗ, ಎರಡು ಮಲಗುವ ಕೋಣೆಗಳು ಮತ್ತು ಸ್ನಾನಗೃಹಗಳನ್ನು ಹೊಂದಿದ್ದು ʼಮಿನಿ ಅರಮನೆʼ ಎಂದೇ ಕರೆಯಲಾಗುತ್ತದೆ. ವರದಿಯ ಪ್ರಕಾರ ಒಂದು ರಾತ್ರಿಗೆ ಈ ಸೂಟ್‌ಗೆ ಸುಮಾರು 7.5 ರಿಂದ 8 ಲಕ್ಷ ರೂ. ವೆಚ್ಚವಾಗುತ್ತದೆ.
ಡಿಸೆಂಬರ್ ಮಧ್ಯಭಾಗದವರೆಗೆ ಮದುವೆ ಇನ್ನಿತರ ಕಾರ್ಯಕ್ರಮಗಳಿಂದ ದೆಹಲಿಯ ಟಾಪ್ ಫೈವ್ ಸ್ಟಾರ್ ಹೋಟೆಲ್‌ಗಳು ಹೆಚ್ ಬುಕ್ ಆಗುತ್ತವೆ. ಭಾರತ್ ಮಂಟಪ ಮತ್ತು ಯಶೋಭೂಮಿಯಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳು ಆಯೋಜನೆಗೊಳ್ಳುವುದರಿಂದ ಅತಿಥಿಗಳು ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡುತ್ತಿರುತ್ತಾರೆ.




