ಬೀಜಿಂಗ್: ಶಾಂಘೈ ಸಹಕಾರ ಶೃಂಗಸಭೆ (SCO Summit) ಆರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ (Narendra Modi) ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದೆ.
ರಷ್ಯಾದ ವಿದೇಶಾಂಗ ಸಚಿವಾಲಯ ಮೂವರು ಮಾತನಾಡುತ್ತಿರುವ ವಿಡಿಯೋವನ್ನು #VideoOfTheDay ಹ್ಯಾಶ್‌ಟ್ಯಾಗ್ ಹಾಕಿ ಪೋಸ್ಟ್ ಮಾಡಿದೆ.
ವ್ಲಾದಿಮರ್ ಪುಟಿನ್ (Vladimir Putin) ಅವರ ಎಡಕೈಯನ್ನು ಹಿಡಿದುಕೊಂಡು ಮೋದಿ ಅವರು ಬರುತ್ತಿದ್ದಾರೆ. ನಡೆದುಕೊಂಡು ಬರುತ್ತಿದ್ದಾಗ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಎದುರಾಗಿದ್ದಾರೆ. ಈ ವೇಳೆ ಮೂವರು ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಲಘು ಸಂಭಾಷಣೆ ಮಾಡಿದ್ದಾರೆ. ಇದನ್ನೂ ಓದಿ:ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರುಶ್ರೀಮಂತರಾಗುತ್ತಿದ್ದಾರೆ:ಭಾರತದ ವಿರುದ್ಧ ಟ್ರಂಪ್‌ಆಪ್ತನಿಂದ ಜಾತಿ ಅಸ್ತ್ರ
🇷🇺🇮🇳🇨🇳 President of Russia Vladimir Putin, Prime Minister of India Narendra Modi, and President of China Xi Jinping just before the start of the #SCO Summit
📹 © https://t.co/1iwVtSG6SN pic.twitter.com/o1rqQWYhT7
— MFA Russia 🇷🇺 (@mfa_russia) September 1, 2025
ಭಾರತ, ರಷ್ಯಾ, ಚೀನಾದ ಜೊತೆ ಅಮೆರಿಕದ ಸಂಬಂಧ ಈಗ ಹಾಳಾಗಿದೆ. ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕದ್ದಕ್ಕೆ ಭಾರತದಿಂದ ಆಮದಾಗುವ ಕೆಲ ವಸ್ತುಗಳಿಗೆ ಅಮೆರಿಕ 25% ತೆರಿಗೆ ವಿಧಿಸಿತ್ತು. ನಂತರ ರಷ್ಯಾದಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ತೆರಿಗೆ ಹಾಕಿದೆ. ಇದನ್ನೂ ಓದಿ:ಮೋದಿ ಸಂಚಾರಕ್ಕೆ ಜಿನ್‌ಪಿಂಗ್‌ಮೆಚ್ಚಿನ ಕಾರು ನೀಡಿದ ಚೀನಾ!
ಅಮೆರಿಕ ತೆರಿಗೆ ಸಮರ ಆರಂಭಿಸಿದ ಬೆನ್ನಲ್ಲೇ ಮೂವರು ನಾಯಕರು ಮಾತುಕತೆ ನಡೆಸಿರುವುದು ಈಗ ವಿಶ್ವದಲ್ಲಿ ಸಂಚಲನ ಮೂಡಿಸಿದೆ.