ಮಾಸ್ಕೋ: ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್ ಲಾವ್ರೋನ ವಿವಾದಿತ ಹೇಳಿಕೆಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಕ್ಷಮೆ ಕೋರಿದ್ದಾರೆ.
ನಫ್ತಾಲಿ ಬೆನೆಟ್ ಉಕ್ರೇನ್ ಮೇಲಿನ ತಮ್ಮ ಕಾರ್ಯಾಚರಣೆ ಕುರಿತು ವಿವರಿಸುವ ಸಂದರ್ಭ ಹಿಟ್ಲರ್ ಯಹೂದಿ ಪರಂಪರೆಯನ್ನು ಹೊಂದಿದ್ದ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ಸಂಬಂಧ ಹದಗೆಡಬಾರದೆಂದು ಪುಟಿನ್ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ನಮಗೆ ನಿಮ್ಮ ಸಲಹೆ ಬೇಡ: ನೆದರ್ಲೆಂಡ್‌ಗೆ ತಿರುಗೇಟು ನೀಡಿದ ಭಾರತ
ಸರ್ಗೇಯ್ ಲಾವ್ರೋ ಸಂದರ್ಶನವೊಂದರಲ್ಲಿ ಯುದ್ಧದ ಬಗ್ಗೆ ರಷ್ಯಾದ ನಿಲುವನ್ನು ವಿವರಿಸುತ್ತಿರುವಾಗ ಹಿಟ್ಲರ್‌ನಲ್ಲಿ ಯಹೂದಿಗಳ ರಕ್ತವಿತ್ತು ಎಂದು ವಿವಾದಿತ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಗೆ ಇಸ್ರೇಲ್ ಸೇರಿದಂತೆ ಹಲವಾರು ಪಾಶ್ಚಿಮಾತ್ಯ ದೇಶಗಳು ಲಾವ್ರೋ ಹೇಳಿಕೆಯನ್ನು ಖಂಡಿಸಿದ್ದವು. ಇದನ್ನೂ ಓದಿ: ಟ್ವಿಟ್ಟರ್‌ಗೆ ಎಲಾನ್ ಮಸ್ಕ್ ತಾತ್ಕಾಲಿಕ CEO?
ಇಸ್ರೇಲ್ ತನ್ನ 74ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆನೆಟ್ ಹಾಗೂ ಪುಟಿನ್ ನಡುವೆ ಮಾತುಕತೆ ನಡೆದಿದ್ದು, ಈ ವೇಳೆ ಪುಟಿನ್ ಕ್ಷಮೆ ಕೋರಿದ್ದಾರೆ. ರಷ್ಯಾ ಹಾಗೂ ಇಸ್ರೇಲ್ ಉತ್ತಮ ಸಂಬಂಧ ಹೊಂದಿದ್ದು, ಬೆನೆಟ್ ಮಾಸ್ಕೋ ಪ್ರವಾಸದಲ್ಲಿ ಉಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.