ಬೆಂಗಳೂರು: ಅಕ್ರಮ ಆಸ್ತಿ ಸಂಬಂಧ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಆಪ್ತೆ ಶಶಿಕಲಾರಿಂದ ಇದೀಗ ಜೈಲು ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ.
Advertisement
4 ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ ವೇಳೆ ಶಶಿಕಲಾಗೆ ಜೈಲಿನಲ್ಲಿದ್ದ ಜೈಲು ಅಧಿಕಾರಿಗಳು ರಾಜಾತಿಥ್ಯ ನೀಡಲು ಲಂಚ ಪಡೆದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ ಎಸಿಬಿ ಹೈಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದೆ. ಶಶಿಕಲಾ ಜೈಲಿನಲ್ಲಿದ್ದಾಗ ಜೈಲು ಅಧಿಕಾರಿಗಳಾಗಿದ್ದ, ಕೃಷ್ಣ ಕುಮಾರ್, ಡಾ. ಅನಿತಾ ಆರ್, ಬಿ.ಎಸ್.ಸುರೇಶ್, ಗಜರಾಜ ಮಕನೂರು, ಇಳವರಸಿ, ಶಶಿಕಲಾಗೆ ರಾಜಾತಿಥ್ಯ ನೀಡಿದ್ದಾರೆ ಎಂದು ಚಾರ್ಜ್‍ಶೀಟ್‍ನಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: ನಾಲ್ಕು ವರ್ಷ ಜೈಲು ಶಿಕ್ಷೆ ಪೂರ್ಣ – ಜೈಲಿನಿಂದ ಶಶಿಕಲಾ ಬಿಡುಗಡೆ
Advertisement
Advertisement
ಪೊಲೀಸರು ಲಂಚ ಪಡೆದಿದ್ದಾರೆ ಎಂಬ ಬಗ್ಗೆ ದೂರು ದಾಖಲಿಸಿದ ಬಳಿಕ ಎಸಿಬಿ ಅಧಿಕಾರಿಗಳು ತನಿಖೆ ವಿಳಂಬ ಮಾಡುತ್ತಿದ್ದಾರೆ ಎಂದು ಕೆ.ಎಸ್.ಗೀತಾ ಪಿಐಎಲ್ ಸಲ್ಲಿಸಿದ್ದರು. ಇದೀಗ ಎಸಿಬಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ಶಶಿಕಲಾ, ಜೈಲು ಅಧಿಕಾರಿಗಳ ವಿರುದ್ಧ ಸರ್ಕಾರದ ಪೂರ್ವಾನುಮತಿ ಪಡೆದು, ಭ್ರಷ್ಟಾಚಾರ ತಡೆ ಕಾಯ್ದೆ ಸೆ.19ರಡಿ ಎಸಿಬಿ ಚಾರ್ಜ್‍ಶೀಟ್ ಹಾಕಿದೆ ಎಂದು ಹೈಕೋರ್ಟ್‍ಗೆ ಎಸಿಬಿ ಪರ ವಕೀಲ ಪಿ.ಎನ್.ಮನಮೋಹನ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಈಗ ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತದೆ: ಮೋದಿ
Advertisement
ಜೈಲು ಅಧಿಕಾರಿ ಕೃಷ್ಣಕುಮಾರ್, ಶಶಿಕಲಾ ಜೈಲಲ್ಲಿ ಇದ್ದಾಗ ಜೈಲಿನ ಸುಪರಿಡೆಂಟ್ ಆಗಿದ್ರು. ಕೃಷ್ಣಕುಮಾರ್ ವರ್ಗಾವಣೆ ಬಳಿಕ ಅನಿತಾ ಅಧಿಕಾರಿ ಆಗಿದ್ದರು. ಜೈಲಿನಲ್ಲಿ ಶಶಿಕಲಾಗೆ ಸೌಕರ್ಯ ಕಲ್ಪಿಸಿಕೊಡಲು ಕೋಟಿ, ಕೋಟಿ ಹಣ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಪೊಲೀಸ್ ಠಾಣೆಯಿಂದಲೇ ಜೀಪ್ ಕದ್ದ ಕಳ್ಳ
ಅಕ್ರಮ ಆಸ್ತಿಗಳಿಕೆ ಸಂಬಂಧ ಶಶಿಕಲಾ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಪರಪ್ಪನಗ್ರಹಾರದಲ್ಲಿ ಸೆರೆ ವಾಸದಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ ಶಶಿಕಲಾ ಕಳೆದ ವರ್ಷ ಬಿಡುಗಡೆಗೊಂಡಿದ್ದರು. ಬಳಿಕ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದಾರೆ.