– ಅದಾನಿ ನಿರ್ಮಾಣದ ವಿಳಿಂಜಂ ಅಂತಾರಾಷ್ಟ್ರೀಯ ಬಂದರು ಉದ್ಘಾಟನೆ
– INDIA ಒಕ್ಕೂಟದಿಂದ ಟೀಕೆ ಗುರಿಯಾಗಿದ್ದ ಅದಾನಿ
ತಿರುವನಂತಪುರಂ: ವಿಳಿಂಜಂ (Vizhinjam Port) ಅಂತಾರಾಷ್ಟ್ರೀಯ ಬಂದರನ್ನು ಉದ್ಘಾಟಿಸಿದ ನರೇಂದ್ರ ಮೋದಿ (Narendra Modi) ನನ್ನ ಜೊತೆ ವೇದಿಕೆ ಮೇಲೆ ಸಿಎಂ ಪಿಣರಾಯಿ ವಿಜಯನ್ (Pinarayi Vijayan), ಶಶಿ ತರೂರ್ (Shashi Tharoor) ಕುಳಿತಿರುವುದು ಹಲವರಿಗೆ ನಿದ್ದೆಗೆಡಿಸಲಿದೆ ಎಂದು ಹೇಳುವ ಮೂಲಕ ನಗೆ ಚಟಾಕಿ ಹಾರಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನಾನು ಹೇಳಲು ಬಯಸುತ್ತೇನೆ. ನೀವು INDIA ಒಕ್ಕೂಟದ ಬಲವಾದ ಆಧಾರಸ್ತಂಭ. ಶಶಿ ತರೂರ್ ಕೂಡ ಇಲ್ಲಿ ಕುಳಿತಿದ್ದಾರೆ. ಇಂದಿನ ಕಾರ್ಯಕ್ರಮವು ಅನೇಕರ ನಿದ್ರೆಯನ್ನು ಕೆಡಿಸಲಿದೆ ಎಂದರು.
ಈ ಬಂದರನ್ನು INDIA ಒಕ್ಕೂಟ ಟೀಕೆ ಮಾಡುತ್ತಿರುವ ಅದಾನಿ ಕಂಪನಿ ಕೇರಳದಲ್ಲಿ ನಿರ್ಮಾಣ ಮಾಡಿದೆ. ತಿರುವನಂತಪುರಂನ ಕಾಂಗ್ರೆಸ್ (Congress) ಸಂಸದರಾಗಿರುವ ಶಶಿತರೂರ್ ಪಕ್ಷದಿಂದ ಹಂತ ಹಂತವಾಗಿ ದೂರ ಸರಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ:ವಿದೇಶಿ ಕಂಪನಿಗಳಿಂದಲೂ ಶಾಕ್ – ಭಾರತಕ್ಕೆ ಬಿಸಿ ಮುಟ್ಟಿಸಲು ಹೋಗಿ ಕೈ ಸುಟ್ಟುಕೊಂಡ ಪಾಕ್!
VIDEO | Kerala: PM Modi addresses a public gathering after inaugurating Vizhinjam International Seaport in Thiruvananthapuram.
“I want to say this to the CM (Pinarayi Vijayan)… you are a strong pillar of INDI alliance. (Congress MP) Shashi Tharoor is also sitting here. Today’s… pic.twitter.com/Z18tXGiaqQ
— Press Trust of India (@PTI_News) May 2, 2025
ಮೋದಿ ಅವರು ತಿರುವನಂತಪುರಂಗೆ ಭೇಟಿ ನೀಡಿದಾಗ ಶಶಿ ತರೂರ್ ವಿಮಾನ ನಿಲ್ದಾಣಕ್ಕೆ ಹೋಗಿ ಸ್ವಾಗತಿಸಿದ್ದರು. ವೇದಿಕೆಯಲ್ಲಿ ಶಶಿ ತರೂರ್ ಅವರೊಂದಿಗಿನ ಪ್ರಧಾನಿ ಮೋದಿ ಅವರ ಸಂವಾದವೂ ಗಮನ ಸೆಳೆದಿದೆ. ತರ ಗಣ್ಯರೊಂದಿಗೆ ಸಂಕ್ಷಿಪ್ತ ಶುಭಾಶಯ ಹೇಳಿದರೆ ಮೋದಿ ತರೂರ್ ಅವರ ಕೈ ಕುಲುಕಿ ಕೆಲ ಸೆಕೆಂಡ್ ಮಾತನಾಡಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಭಾರತದ ಮೊದಲ ಟ್ರಾನ್ಸ್‌ಶಿಪ್‌ಮೆಂಟ್ ಹಬ್‌ಗೆ ಪ್ರಧಾನಿ ಮೋದಿ ಚಾಲನೆ
ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದ ನಿಲುವು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ತರೂರ್ ಅವರು ಈ ಹಿಂದೆ ಹೊಗಳಿದ್ದರು.
ಈ ಬಂದರನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 8,900 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಭಾರತದ ಮೊದಲ ಟ್ರಾನ್ಸ್‌ಶಿಪ್‌ಮೆಂಟ್ ಹಬ್‌ಗೆ ಇದಾಗಿರುವು ವಿಶೇಷ. ಹಡಗಿನಿಂದ ಹಡಗಿಗೆ ಸರಕು ಸಾಗಿಸುವ ಬಂದರು ಭಾರತದಲ್ಲಿ ಇರಲಿಲ್ಲ. ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ.