ಬೆಂಗಳೂರು: ಒಂದು ಕಡೆ ಟಿ20 ವಿಶ್ವಕಪ್ (T20 World Cup) ಕ್ರಿಕೆಟ್ ಟೂರ್ನಿಗೆ ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ಪ್ರೊ ಕಬಡ್ಡಿ 9ನೇ ಸೀಸನ್ (Pro Kabaddi Season 9) ಇಂದಿನಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kanteerava Indoor Stadium in Bengaluru) ಆರಂಭವಾಗುತ್ತಿದೆ. ಈ ಮೂಲಕ ಕ್ರೀಡಾ ಪ್ರಿಯರಿಗೆ ಮುಂದಿನ 4 ತಿಂಗಳುಗಳ ಕಾಲ ಹಬ್ಬದ ವಾತಾವರಣ.
Advertisement
ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಫೀವರ್ ಆರಂಭವಾದರೆ, ಸಿಲಿಕಾನ್ ಸಿಟಿಯಲ್ಲಿ ಖೇಲ್ ಕಬಡ್ಡಿ ಕಲರವ ಕೇಳಿಬರಲಿದೆ. ಪ್ರೊ ಕಬಡ್ಡಿ 8ನೇ ಸೀಸನ್ ಕೊರೊನಾದಿಂದಾಗಿ (Corona) ಮುಚ್ಚಿದ ಸ್ಟೇಡಿಯಂನಲ್ಲಿ ನಡೆದಿತ್ತು. ಇದೀಗ 3 ವರ್ಷಗಳ ಬಳಿಕ ವೀಕ್ಷಕರಿಗೆ ಪ್ರವೇಶ ಮುಕ್ತವಾಗುತ್ತಿದೆ. ಹೀಗಾಗಿ ದೇಸಿ ಕ್ರೀಡೆ ಕಬಡ್ಡಿ ಕ್ರೇಜ್ ಹೆಚ್ಚಾಗಿದೆ. ಇದನ್ನೂ ಓದಿ: 22 ಸಿಕ್ಸ್, 17 ಬೌಂಡರಿ – ಟಿ20ಯಲ್ಲಿ ಬರೋಬ್ಬರಿ 205 ರನ್ ಬ್ಲ್ಯಾಸ್ಟ್
Advertisement
Advertisement
ಈ ಬಾರಿಯ ಪ್ರೊ ಕಬಡ್ಡಿ ಪಂದ್ಯಾವಳಿ ಬೆಂಗಳೂರು ಸೇರಿದಂತೆ 3 ಕೇಂದ್ರಗಳಲ್ಲಿ ನಡೆಯಲಿದೆ. ಬೆಂಗಳೂರು, ಪುಣೆ ಮತ್ತು ಹೈದರಾಬಾದ್‍ನಲ್ಲಿ ಈ ಬಾರಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಕಳೆದ ವರ್ಷ ಬೆಂಗಳೂರಿನಲ್ಲೇ ಪ್ರೊ ಕಬಡ್ಡಿ ನಡೆದಿದ್ದರೂ, ಬಯೋ ಬಬಲ್‍ನಲ್ಲಿ ನಡೆದಿತ್ತು. ಹಾಗಾಗಿ ಆರಂಭದಲ್ಲಿ ಮಾಧ್ಯಮಗಳಿಗೂ ಪ್ರವೇಶ ನೀಡಿರಲಿಲ್ಲ. ಇದೀಗ ಮಾಧ್ಯಮಗಲೂ ಸೇರಿದಂತೆ ಅಭಿಮಾನಿಗಳಿಗೂ ಪ್ರವೇಶವಿರುವ ಬಗ್ಗೆ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ತಿಳಿಸಿದೆ. ಜೊತೆಗೆ ಒಂದೇ ದಿನ ಮೂರು ಪಂದ್ಯಗಳು ಕೂಡ ಕೆಲದಿನಗಳಲ್ಲಿ ನಡೆಯಲಿದೆ. ಇದನ್ನೂ ಓದಿ: ಕೊನೆಯಲ್ಲಿ ಸ್ಯಾಮ್ಸನ್ ಸಿಕ್ಸರ್, ಬೌಂಡರಿ ಆಟ – ಭಾರತಕ್ಕೆ ವಿರೋಚಿತ ಸೋಲು, ಆಫ್ರಿಕಾಗೆ 9 ರನ್ ಜಯ
Advertisement
ಕರ್ನಾಟಕದ ಬೆಂಗಳೂರು ಬುಲ್ಸ್ (Bengaluru Bulls), ಬೆಂಗಾಲ್ ವಾರಿಯರ್ಸ್ (Bengal Warriors), ಜೈಪುರ್ ಪಿಂಕ್ ಫ್ಯಾಂಥರ್ಸ್ (Jaipur Pink Panthers), ಪುಣೇರಿ ಪಲ್ಟನ್ (Puneri Paltan), ಯು ಮುಂಬಾ (U Mumba), ಯೂಪಿ ಯೋಧಾ (U.P. Yodha), ತಮಿಳ್ ತಲೈವಾಸ್ (Tamil Thalaivas), ಹರಿಯಾಣ ಸ್ಟೀಲರ್ಸ್ (Haryana Steelers), ದಬಾಂಗ್ ಡೆಲ್ಲಿ (Dabang Delhi), ಪಾಟ್ನಾ ಪೈರೇಟ್ಸ್ (Patna Pirates), ತೆಲುಗು ಟೈಟಾನ್ಸ್ (Telugu Titans), ಗುಜಾರಾತ್ ಫಾರ್ಚೂನ್‍ಜೈಂಟ್ಸ್ (Gujarat Giants) ಸೇರಿ ಒಟ್ಟು 12 ತಂಡಗಳ ಈ ಬಾರಿ 9ನೇ ಸೀಸನ್ ಪ್ರಶಸ್ತಿಗಾಗಿ ಕಾದಾಡಲಿವೆ. ಲೀಗ್ ಹಂತದ 132 ಪಂದ್ಯಗಳಿಗೆ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ ಆತಿಥ್ಯವಹಿಸಲಿದೆ. ಮೊದಲ 41 ಪಂದ್ಯಗಳು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿವೆ. ಆ ಬಳಿಕ ಪುಣೆ ನಂತರ ಹೈದರಾಬಾದ್‍ಗೆ ಲೀಗ್ ಸ್ಥಳಾಂತರಗೊಳ್ಳಲಿದೆ. ಲೀಗ್ ಬಳಿಕ ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇಆಫ್‍ಗೇರಲಿವೆ. ಪ್ಲೇಆಫ್‍ನಲ್ಲಿ 2 ಎಲಿಮಿನೇಟರ್, 2 ಸೆಮಿಫೈನಲ್, ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ನೆಟ್ಸ್‌ನಲ್ಲಿ ಬೆವರಿಳಿಸಿದ ಬ್ಯೂಟಿ – ಶಹಬ್ಬಾಸ್‌ಗಿರಿ ನೀಡಿ ಫ್ಯಾನ್ಸ್ ಕ್ಲೀನ್ ಬೌಲ್ಡ್
ಬುಲ್ಸ್‌ನಲ್ಲಿಲ್ಲ ಪವನ್ ಶೆರಾವತ್:
ಆತಿಥೇಯ ಬೆಂಗಳೂರು ಬುಲ್ಸ್ ಸ್ಟಾರ್ ಆಟಗಾರ ಪವನ್ ಶೆರಾವತ್ ಈ ಬಾರಿ ತಂಡದಲ್ಲಿಲ್ಲ. ಈ ಬಾರಿಯ ಹರಾಜಿನಲ್ಲಿ ಶೆರಾವತ್ ತಮಿಳ್ ತಲೈವಾಸ್ ಪಾಲಾಗಿದ್ದಾರೆ. ಬುಲ್ಸ್ ನೂತನ ನಾಯಕ ವಿಕಾಸ್ ಖಂಡೋಲ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ.
8 ಆವೃತ್ತಿಗಳ ಚಾಂಪಿಯನ್ಸ್:
2014ರ ಮೊದಲ ಆವೃತ್ತಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಪ್ರಶಸ್ತಿ ಗೆದ್ದರೆ, 2015ರಲ್ಲಿ ಯು ಮುಂಬಾ, ಮೂರು, ನಾಲ್ಕು ಮತ್ತು ಐದನೇ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್, 6ನೇ ಅವೃತ್ತಿಯಲ್ಲಿ ಬೆಂಗಳೂರು ಬುಲ್ಸ್, 7ನೇ ಅವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು 8ನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Live Tv
[brid partner=56869869 player=32851 video=960834 autoplay=true]