ವಿರಾಟ್ ಕೊಹ್ಲಿಯ ಜಾಹೀರಾತು ನಿಲ್ಲಿಸಿದ ವಿವೋ

Advertisements

ಮುಂಬೈ: ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ವಿವೋ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯನ್ನು ತೀವ್ರಗೊಳಿಸಿದ ಬೆನ್ನಲ್ಲೇ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದ್ದ ಜಾಹೀರಾತನ್ನು ಪ್ರಸಾರ ಮಾಡದಿರಲು ಕಂಪನಿ ನಿರ್ಧರಿಸಿದೆ.

Advertisements

2021ರ ಏಪ್ರಿಲ್ ತಿಂಗಳಲ್ಲಿ ವಿವೋ ಕಂಪನಿ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ವಿರಾಟ್ ಕೊಹ್ಲಿಯನ್ನು ನೇಮಕ ಮಾಡಿತ್ತು. ಆ ಬಳಿಕ ಕೊಹ್ಲಿ ವಿವೋ ಸಂಸ್ಥೆಯ ಪ್ರಚಾರ, ಈವೆಂಟ್‍ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಸೇರಿದಂತೆ ಜಾಹೀರಾತುಗಳಲ್ಲಿ ಕೊಹ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ನಡುವೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೋ ಮೊಬೈಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಹಾಗೂ ಇದರ ಸಹಭಾಗಿಯಾಗಿರುವ ವಿವಿಧ 23 ಕಂಪನಿಗಳ ಮೇಲೆ ಇಡಿ ಕೆಲ ದಿನಗಳ ಹಿಂದೆ ದಾಳಿ ಮಾಡಿತ್ತು. ಇದಾದ ಬಳಿಕ ಕಂಪನಿಯ ವಿರುದ್ಧ ತನಿಖೆ ಪೂರ್ಣಗೊಳ್ಳುವ ವರೆಗೆ ಕೊಹ್ಲಿ ಇರುವ ಜಾಹೀರಾತನ್ನು ಪ್ರಸಾರ ಮಾಡದಿರಲು ವಿವೋ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ತೆರಿಗೆ ಪಾವತಿ ತಪ್ಪಿಸಲು 62,476 ಕೋಟಿ ರೂ.ಗಳನ್ನ ಚೀನಾಕ್ಕೆ ಕಳುಹಿಸಿದ ವಿವೋ- ED ತನಿಖೆ ವೇಳೆ ಅಕ್ರಮ ಬಯಲು

Advertisements

ಈ ಬಗ್ಗೆ ವಿವೋ ಆಪ್ತ ಮೂಲಗಳ ಪ್ರಕಾರ ಇಡಿ ತನಿಖೆ ಪೂರ್ಣಗೊಳ್ಳುವವರೆಗೆ ಕೊಹ್ಲಿ ಇರುವ ಜಾಹೀರಾತು ಮತ್ತು ಪ್ರಚಾರ ಚಟುವಟಿಕೆಗಳನ್ನು ತಡೆಹಿಡಿಯಲು ನಿರ್ಧರಿಸಲಾಗಿದೆ. ಇದೊಂದು ಕಾರಣವಾದರೆ. ಇನ್ನೊಂದು ಕೊಹ್ಲಿ ವಿವೋ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಭಾರತದಲ್ಲಿ ಅಪಸ್ವರ ಕೇಳಿಬರುತ್ತಿದೆ. ಟೀಂ ಇಂಡಿಯಾ ಆಟಗಾರರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ – ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಧೋನಿ

Advertisements

ಇದಲ್ಲದೆ ಈ ಆರೋಪದ ಬಳಿಕ ಕೊಹ್ಲಿ ಇರುವ ಜಾಹೀರಾತು ಪ್ರಸಾರಗೊಂಡರೆ ಕೊಹ್ಲಿ ಇಮೇಜ್‍ಗೆ ಧಕ್ಕೆ ಬರುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಜಾಹೀರಾತು ಪ್ರಸಾರ ಮಾಡದಿರಲು ಕಂಪನಿ ನಿರ್ಧರಿಸಿದೆ. ಜೊತೆಗೆ ಕೊಹ್ಲಿ ಭಾರತ ತಂಡದಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದಾಗಿ ವಿವೋ ಈ ರೀತಿ ಮಾಡಿದೆ ಎಂಬ ಮಾತು ಕೇಳಿ ಬರುತ್ತಿದೆ.

ಏನಿದು ಆರೋಪ:
ಚೀನಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆ ವಿವೋ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ತನ್ನ ಕಂಪನಿ ವಹಿವಾಟಿನ ಶೇ.50 ಪ್ರತಿಶತದಷ್ಟು ಅಂದರೆ ಸುಮಾರು 62,476 ಕೋಟಿ ಹಣವನ್ನು ಚೀನಾಕ್ಕೆ ಕಳುಹಿಸಿಕೊಟ್ಟಿದೆ ಎಂದು ED ತಿಳಿಸಿತ್ತು. ಬಳಿಕ ಇಡಿ ವಿವೋ ಮತ್ತು 23 ಸಂಬಂಧಿತ ಕಂಪನಿಗಳಿಗೆ ಸೇರಿದ 48 ನಿವೇಶನಗಳಲ್ಲಿ ಶೋಧ ಕಾರ್ಯ ನಡೆಸಿತ್ತು.

Live Tv

Advertisements
Exit mobile version