ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದ ಭಾರತೀಯ ಮೂಲದ ವಿವೇಕ್‌ – ಟ್ರಂಪ್‌ಗೆ ಬೆಂಬಲ

Public TV
1 Min Read
vivek ramaswamy donald trump

ನವದೆಹಲಿ: ಭಾರತೀಯ-ಅಮೆರಿಕನ್ ವಾಣಿಜ್ಯೋದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ಅವರು ಯುಎಸ್ ಅಧ್ಯಕ್ಷೀಯ (US Presidential Election) ರೇಸ್‌ನಿಂದ ಹೊರಗುಳಿದಿದ್ದಾರೆ. ಇದೇ ವರ್ಷ ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಅಯೋವಾ ರಿಪಬ್ಲಿಕನ್ ಸಭೆ ನಂತರ ಡೊನಾಲ್ಡ್ ಟ್ರಂಪ್‌ಗೆ (Donald Trump) ತಮ್ಮ ಬೆಂಬಲ ಘೋಷಿಸಿದ್ದಾರೆ. ರಾಮಸ್ವಾಮಿ ಅವರು ಫೆಬ್ರವರಿ 2023 ರಲ್ಲಿ ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿ ಎನ್ನುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದರು. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ 1 ಮೊಟ್ಟೆಯ ಬೆಲೆ 33 ರೂ. – ಈರುಳ್ಳಿ ಪ್ರತಿ ಕೆಜಿಗೆ 250 ರೂ.

Vivek Ramaswamy

ತಮ್ಮ ನಿಲುವುಗಳ ಮೂಲಕ ರಿಪಬ್ಲಿಕನ್‌ ಮತದಾರರು ಮತ್ತು ಬೆಂಬಲಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅವರ ಪ್ರಚಾರ ಕಾರ್ಯತಂತ್ರವು ಮಾಜಿ ಅಧ್ಯಕ್ಷ ಟ್ರಂಪ್ ಅವರ ನೀತಿಯನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ. ಹಿಂದಿನ ಚುನಾವಣೆಗಳಲ್ಲಿ ಟ್ರಂಪ್ ಅವರನ್ನು ಯಶಸ್ಸಿನತ್ತ ಮುನ್ನಡೆಸಿದ್ದ ಸಂಪ್ರದಾಯವಾದಿ ವಲಯದ ಗಮನ ಸೆಳೆಯಲು ರಾಮಸ್ವಾಮಿ ಪ್ರಯತ್ನಿಸಿದ್ದರು.

ಓಹಿಯೋ ಮೂಲದ ರಾಮಸ್ವಾಮಿ, ಕೇರಳದಿಂದ ವಲಸೆ ಹೋಗಿದ್ದ ಕುಟುಂಬವೊಂದರ ಪುತ್ರ. ಟ್ರಂಪ್ ಅವರ ಖ್ಯಾತಿಯಿಂದ ಹೆಚ್ಚು ಪ್ರಾಬಲ್ಯ ಹೊಂದಿರುವ ರಿಪಬ್ಲಿಕನ್ ಕ್ಷೇತ್ರದಲ್ಲಿ ಅನಿರೀಕ್ಷಿತ ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಇದನ್ನೂ ಓದಿ: ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

ಅಯೋವಾದಲ್ಲಿ ರಾಮಸ್ವಾಮಿ ಅವರ ವಿರುದ್ಧದ ಅಲೆಯಿದೆ. ಅಯೋವಾದಲ್ಲಿ ಇವರು ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಸುಮಾರು 7.7% ಮತಗಳನ್ನು ಪಡೆದಿದ್ದಾರೆ.

Share This Article