ಥಾಣೆ: ಬಾಲಿವುಡ್ ನಟ ವಿವೇಕ್ ಓಬೆರಾಯ್ ಅವರ ಕರ್ಮ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹುತಾತ್ಮ ಸಿಆರ್‍ಪಿಎಫ್ ಯೋಧರ ಕುಟುಂಬಸ್ಥರಿಗೆ 25 ಫ್ಲಾಟ್ ಗಳನ್ನು ನೀಡಿದೆ.
ಈ ಬಗ್ಗೆ ಕಂಪನಿ ವತಿಯಿಂದ ಹುತಾತ್ಮ ಯೋಧರ ಸಂಬಂಧಿಕರಿಗೆ ಪತ್ರ ಬರೆಯಲಾಗಿದೆ. ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಯೋಧರ ಕುಟುಂಬಸ್ಥರಿಗೆ ಫ್ಲಾಟ್ ಗಳನ್ನು ನೀಡುವುದಾಗಿ ಪತ್ರದಲ್ಲಿ ಹೇಳಲಾಗಿದೆ. ಇದರಲ್ಲಿ 4 ಫ್ಲಾಟ್‍ಗಳನ್ನು ಈಗಾಗಲೇ ಯೋಧರ ಕುಟುಂಬಕ್ಕೆ ನೀಡಿರುವುದಾಗಿ ವರದಿಯಾಗಿದೆ.
Advertisement
Advertisement
ಫ್ಲಾಟ್ ನೀಡಲಾಗಿರುವ ಯೋಧರ ಕುಟುಂಬಗಳ ಪಟ್ಟಿಯನ್ನು ಸಂಸ್ಥೆ ಬಿಡುಗಡೆ ಮಾಡಿದ್ದು, ಉಳಿದ ಯೋಧರ ಕುಟುಂಬಕ್ಕೆ ಶೀಘ್ರದಲ್ಲಿಯೇ ಫ್ಲಾಟ್‍ಗಳನ್ನು ಹಸ್ತಾಂತರ ಮಾಡಲಾಗುತ್ತದೆ ಎನ್ನಲಾಗಿದೆ.
Advertisement
ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ 12 ಹುತಾತ್ಮ ಯೋಧರ ಕುಟುಂಬಸ್ಥರಿಗೆ ರೂ.1.08 ಕೋಟಿ ರೂ. ನೆರವು ನೀಡಿದ್ದರು.
Advertisement
2017ರ ಮಾರ್ಚ್ 11 ರಂದು ಛತ್ತೀಸ್‍ಘಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ 219 ಬೆಟಾಲಿಯನ್‍ಗೆ ಸೇರಿದ ಸುಮಾರು 25 ಮಂದಿ ಯೋಧರು ಹುತಾತ್ಮರಾಗಿದ್ದರು.