ಕಾನ್ ಫೆಸ್ಟಿವಲ್ (Cannes Film Festival) ನಲ್ಲಿ ವಿಚಿತ್ರ ಕಾಸ್ಟ್ಯೂಮ್ ಮೂಲಕ ಸದ್ದು ಮಾಡಿರುವ ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಅವರನ್ನು ದಿ ಕಾಶ್ಮೀರ್ ಸ್ಟೋರಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಬಲವಾಗಿ ಟೀಕಿಸಿದ್ದಾರೆ. ಅವರ ಕಾಸ್ಟ್ಯೂಮ್ ಎತ್ತಿಕೊಂಡು ಬರುವ ವ್ಯಕ್ತಿಗಳ ಕುರಿತು ‘ಕಾಸ್ಟ್ಯೂಮ್ ಗುಲಾಮರು’ ಎಂದು ಅವರು ಕರೆದಿದ್ದಾರೆ. ಈ ಸಂಸ್ಕೃತಿ ಸರಿಯಲ್ಲ ಎಂದೂ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Advertisement
‘ಕಾಸ್ಟ್ಯೂಮ್ (Costume) ಗುಲಾಮರು ಎನ್ನುವ ಪದವನ್ನು ನೀವು ಕೇಳಿದ್ದೀರಾ? ಈ ರೀತಿಯ ಗುಲಾಮರು ಹೆಚ್ಚಾಗಿ ಮಹಿಳೆಯರೇ ಇರುತ್ತಾರೆ. ಹೊಂದಿಕೆ ಆಗದೇ ಇರುವ ಕಾಸ್ಟ್ಯೂಮ್ ಏನನ್ನು ಸೂಚಿಸುತ್ತದೆ? ಆ ರೀತಿಯ ಕಾಸ್ಟ್ಯೂಮ್ ಗಳಿಗೆ ಯಾಕೆ ನಾವು ಮೂರ್ಖರಾಗುತ್ತಿದ್ದೇವೆ. ಬಾಲಿವುಡ್ ನಲ್ಲೂ ಇಂತಹ ಘಟನೆಗಳು ನಡೆಯುತ್ತವೆ’ ಎಂದು ಅವರು ಬರೆದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಈ ರೀತಿ ಬರೆದುಕೊಂಡರೆ, ಐಶ್ವರ್ಯಾ ರೈ ಫ್ಯಾನ್ಸ್ ವಿವೇಕ್ ಅವರಿಗೆ ತಿರುಗೇಟು ಕೂಡ ನೀಡಿದ್ದಾರೆ.
Advertisement
Advertisement
76ನೇ ಕಾನ್ ಫೆಸ್ಟಿವಲ್ ಫ್ಯಾನ್ಸ್‌ನಲ್ಲಿ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ಮೇ 16ರಿಂದ ಶುರುವಾಗಿರುವ ಈ ಕಾರ್ಯಕ್ರಮ ಮೇ 27ಕ್ಕೆ ಅಂತ್ಯವಾಗಲಿದೆ. ಕಾನ್ ಚಿತ್ರೋತ್ಸವದಲ್ಲಿ ಐಶ್ವರ್ಯ ರೈ, ಊರ್ವಶಿ ರೌಟೇಲಾ, ಮೃಣಾಲ್ ಠಾಕೂರ್ (Mrunal Thakur), ಪಾಲ್ಗೊಂಡಿದ್ದಾರೆ. ಇದನ್ನೂ ಓದಿ:‘ಸಿದ್ದರಾಮಯ್ಯ ಎಂಬ ನಾನು’: ಸಿದ್ದರಾಮಯ್ಯ ಕುರಿತು ಮತ್ತೊಂದು ಸಿನಿಮಾ ಘೋಷಣೆ
Advertisement
ಕರಾವಳಿ ಬೆಡಗಿ ಐಶ್ವರ್ಯಾ ರೈ (Aishwarya Rai) ಅವರು ಗ್ರೀನ್ ಬಣ್ಣದ ಡ್ರೆಸ್ ಮತ್ತು ಕಪ್ಪು- ಸಿಲ್ವರ್ ಮಿಶ್ರಿತ ಕಲರ್ ಗೌನ್‌ನಲ್ಲಿ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಲುಕ್ ಮತ್ತು ಕಣ್ಣಿನ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಊರ್ವಶಿ ರೌಟೇಲಾ (Urvashi Rautela) ಅವರು ಬಾದಮ್ ಮತ್ತು ನೀಲಿ ಕಲರ್ ಮಿಕ್ಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ತುಟಿಗೆ ನೀಲಿ ಬಣ್ಣದ ಲಿಪ್‌ಸ್ಟಿಕ್ ಹಾಕಿದ್ದಾರೆ. ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ‘ಸೀತಾ ರಾಮಂ’ ಸುಂದರಿ ಮೃಣಾಲ್ ಠಾಕೂರ್ ಅವರು ಬಿಳಿ ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.