ನಾಗ್ಪುರ: ಆಸೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಲ್ಲೂ ಮಿಂಚಿದ ಯುವ ಆಟಗಾರ ವಿಜಯ್ ಶಂಕರ್ ಈ ಮೂಲಕ ತಮ್ಮ ವಿಶ್ವಕಪ್ ಹಾದಿಯನ್ನ ಸುಗಮ ಮಾಡಿಕೊಂಡಿದ್ದಾರೆ.
ಇಂದಿನ ಪಂದ್ಯದಲ್ಲಿ ಅವರು ನೀಡಿದ ಪ್ರದರ್ಶನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರಶಂಸೆಗೆ ಕಾರಣವಾಗಿದೆ. ಟೀಂ ಇಂಡಿಯಾಗೆ 500ನೇ ಗೆಲುವಿನ ಸವಿ ಪಡೆಯಲು ಕೂಡ ಶಂಕರ್ ಕಾರಣರಾದರು.
Advertisement
Brilliant century from Virat , outstanding death over bowling from Bumrah and Vijay Shankar holding his nerves really well in the end. Bahut badhiya jeet. #INDvAUS
— Virender Sehwag (@virendersehwag) March 5, 2019
Advertisement
ಅಂತಿಮ ಓವರಿನಲ್ಲಿ ಮ್ಯಾಜಿಕ್ ಮಾಡಿದ ಶಂಕರ್ ತಾವು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರು ಎಂಬ ಸಂದೇಶವನ್ನು ಆಯ್ಕೆ ಸಮಿತಿಗೆ ರವಾನಿಸಿದರು. ಅರ್ಧ ಶತಕ ಸಿಡಿಸಿ ಸೆಟ್ ಬ್ಯಾಟ್ಸ್ ಮನ್ ಆಗಿದ್ದ ಸ್ಟೋಯಿನ್ಸ್ ಹಾಗೂ ಜಂಪಾ ವಿಕೆಟ್ ಪಡೆದ ಶಂಕರ್ ಪ್ರಶಂಸೆಗೆ ಪಡೆದಿದ್ದಾರೆ.
Advertisement
ಇದಕ್ಕೂ ಮುನ್ನ ಬ್ಯಾಟಿಂಗ್‍ನಲ್ಲೂ ಮಿಂಚಿದ ಶಂಕರ್ ನಾಯಕ ಕೊಹ್ಲಿ ಅವರೊಂದಿಗೆ ಉಪಯುಕ್ತ ಇನ್ನಿಂಗ್ಸ್ ನಿರ್ಮಿಸಿದರು. ಒಂದಂತದಲ್ಲಿ ಕೊಹ್ಲಿಗಿಂತ ವೇಗವಾಗಿ ರನ್ ಗಳಿಸಿದ ಶಂಕರ್ 46 ರನ್ ಗಳಿಸಿದ್ದ ವೇಳೆ ದುದೃಷ್ಟವಶಾತ್ ರನೌಟ್ ಆದ್ರು. ಆದರೆ ಈ ಪಂದ್ಯದಲ್ಲಿ ಶಂಕರ್ ಅರ್ಧ ಶತಕ ಸಿಡಿಸಲು ಅರ್ಹರಾಗಿದ್ದರು.
Advertisement
Vijay Shankar ki ticket for World Cup is confirmed @vijayshankar260
— Harbhajan Turbanator (@harbhajan_singh) March 5, 2019
ಪಂದ್ಯ ಆರಂಭಕ್ಕೂ ಮುನ್ನವೇ ಅನುಭವಿ ಜಡೇಜಾ ಹಾಗು ಶಂಕರ್ ನಡುವೇ ವಿಶ್ವಕಪ್ ಆಯ್ಕೆಗೆ ಪೈಪೋಟಿ ನಡೆಯುತ್ತಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು. ಆಯ್ಕೆ ಸಮಿತಿ ಬೌಲಿಂಗ್ ವಿಭಾಗದಲ್ಲಿ ಬುಮ್ರಾ, ಭುವನೇಶ್ವರ್, ಶಮಿ ಮುಂದಾಳತ್ವದಲ್ಲಿ ಹೆಜ್ಜೆ ಇಟ್ಟಿರುವುದು ಸ್ಪಷ್ಟವಾಗುತ್ತಿದೆ. ಇತ್ತ ಗಾಯದ ಸಮಸ್ಯೆಯಿಂದ ಆಸೀಸ್ ಟೂರ್ನಿಗೆ ಅಲಭ್ಯವಾಗಿರುವ ಹಾರ್ದಿಕ್ ವಿಶ್ವಕಪ್‍ಗೆ ಚೇತರಿಕೊಳ್ಳುವ ವಿಶ್ವಾಸ ಇದೆ. ಇದರಂತೆ ಹೆಚ್ಚಿನ ಆಯ್ಕೆಯಾಗಿ ಶಂಕರ್ ಹಾಗೂ ರವೀಂದ್ರ ಜಡೇಜಾ ಪ್ರದರ್ಶನ ಮೇಲೆ ಆಯ್ಕೆ ಸಮಿತಿ ಕಣ್ಣಿಟ್ಟಿದೆ. ಒಂದು ಪ್ರದರ್ಶನ ಮೇಲೆ ಆಟಗಾರರ ಆಯ್ಕೆ ಖಚಿತ ಪಡಿಸುವುದು ಕಷ್ಟಸಾಧ್ಯವಾದರು. ಇಂದಿನ ಪಂದ್ಯದಲ್ಲಿ ಶಂಕರ್ ಆಯ್ಕೆ ಸಮಿತಿಯ ಗಮನ ಸೆಳೆದಿರುವುದು ಪಕ್ಕ.
Vijay Shanker ????????????????????????????????????????????????????????????????????????????????????????????????????????????????????????????????????
— Michael Clarke (@MClarke23) March 5, 2019
The ground Shankar is covering with the bat is getting lost with the ball. Soon, India will have to start considering him as a genuine batsman. Won’t give you 3 in a T20 or 6 in an ODI. #IndvAus
— Aakash Chopra (@cricketaakash) March 5, 2019
Another win ???????????????????? top bowling performance by all the bowlers @Jaspritbumrah93 @MdShami11 @JadhavKedar @imkuldeep18 @imjadeja @vijayshankar260 ???????????????? great team effort ????????2-0 #INDvsAUS
— Rahul Sharma (@ImRahulSharma3) March 5, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv