ಕೋಲ್ಕತ್ತಾ: ಕಾಲೇಜು ಶುಲ್ಕವನ್ನು ದಿಢೀರ್ ಶೇ.20ರಷ್ಟು ಹೆಚ್ಚಳ ಮಾಡಿದ್ದನ್ನು ವಿರೋಧಿಸಿ ವಿಶ್ವವಿದ್ಯಾಲಯದ ಉಪನ್ಯಾಸಕರೂ ಸೇರಿದಂತೆ 200 ಜನ ಸಿಬ್ಬಂದಿಯನ್ನು ಕೂಡಿ ಹಾಕಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಬಿರ್ಭಮ್‍ನ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಗಳ ಕೋಪಕ್ಕೆ ಗುರಿಯಾದ ಉಪನ್ಯಾಸಕರು ಸಭಾಂಗಣದಲ್ಲಿ ಕುಳಿತು ಕಾಲ ಕಳೆಯುವಂತಾಗಿದೆ. ವಿಶ್ವವಿದ್ಯಾಲಯದ ಎಲ್ಲಾ ಗೇಟ್‍ಗಳಿಗೆ ವಿದ್ಯಾರ್ಥಿಗಳು ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
Advertisement
West Bengal:Visva-Bharati University students in Birbhum protesting against 20% fee hike allegedly locked the gate of the university y'day,200 teachers&staff are still inside university premises. VC says, "Saddened by students' behavior. Y'day, we had 5-hour discussion with them" pic.twitter.com/GqvL9Q0cD2
— ANI (@ANI) May 22, 2019
Advertisement
ಈ ಕುರಿತು ಪ್ರತಿಕ್ರಿಯೆ ನೀಡಿದ ವಿಶ್ವವಿದ್ಯಾಲಯದ ಉಪಕುಲಪತಿ ಅವರು, ವಿದ್ಯಾರ್ಥಿಗಳ ವರ್ತನೆಯಿಂದ ದುಃಖಿತನಾಗಿದ್ದೇನೆ. ಅವರೊಂದಿಗೆ 5 ಗಂಟೆಗಳ ಚರ್ಚೆ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.