ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ-‌ ತುರ್ತು ಭೂಸ್ಪರ್ಶ

Public TV
1 Min Read
Vistara

ಮುಂಬೈ: ಪ್ಯಾರಿಸ್‌ನಿಂದ 306 ಜನರನ್ನು ಹೊತ್ತು ಮುಂಬೈಗೆ ತೆರಳುತ್ತಿದ್ದ ವಿಸ್ತಾರಾ ವಿಮಾನಕ್ಕೆ (Vistara Paris-Mumbai flight) ಬಾಂಬ್ ಬೆದರಿಕೆಯೊಂದು ಬಂದಿದ್ದು, ಈ ಹಿನ್ನೆಲೆಯಲ್ಲಿ ಇಂದು (ಭಾನುವಾರ) ಬೆಳಗ್ಗೆ 10.19ಕ್ಕೆ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

ಮೂಲಗಳ ಪ್ರಕಾರ, ಪ್ಯಾರಿಸ್-ಮುಂಬೈ ವಿಮಾನದಲ್ಲಿ 294 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಮತ್ತೆ ಬಾಂಬ್ ಬೆದರಿಕೆ

ವಿಸ್ತಾರಾ ಹೇಳಿದ್ದೇನು?: 2024 ರ ಜೂನ್ 2 ರಂದು ಪ್ಯಾರಿಸ್‌ನಿಂದ ಮುಂಬೈಗೆ ಹಾರಾಟ ನಡೆಸುತ್ತಿರುವ ಏರ್‌ಲೈನ್‌ನ ಯುಕೆ 024 ವಿಮಾನದಲ್ಲಿ ನಮ್ಮ ಸಿಬ್ಬಂದಿಯು ವಿಮಾನದ ಏರ್‌ಸಿಕ್‌ನೆಸ್‌ ಬ್ಯಾಗಿನಲ್ಲಿ ಬಾಂಬ್‌ ಬೆದರಿಕೆ ಇರುವ ಪತ್ರವನ್ನು ಗಮನಿಸಿದ್ದಾರೆ ಎಂದು ಪ್ರಕಟಣೆ ಹೊರಡಿಸುವ ಮೂಲಕ ವಿಸ್ತಾರಾ ಏರ್‌ಲೈನ್ಸ್ ದೃಢಪಡಿಸಿದೆ.

ಪ್ರೋಟೋಕಾಲ್ ಅನ್ನು ಅನುಸರಿಸಿ ತಕ್ಷಣ ನಾವು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತಾಗಿ ಲ್ಯಾಂಡಿಂಗ್‌ ಮಾಡಲಾಯಿತು. ವಿಸ್ತಾರಾದಲ್ಲಿ, ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಯು ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ವಿಸ್ತಾರಾ ವಕ್ತಾರರು ತಿಳಿಸಿದ್ದಾರೆ.‌

Share This Article