ಬೆಂಗಳೂರು: ವಿಸ್ಟಾಡೋಮ್ ಕೋಚ್ ಅನ್ನು ಬೆಂಗಳೂರು-ಶಿವಮೊಗ್ಗ ನಡುವೆ ಸಂಚರಿಸುವ ರೈಲಿಗೆ ಪ್ರಾಯೋಗಿಕವಾಗಿ ಅಳವಡಿಸಲು ನೈಋತ್ಯ ರೈಲ್ವೆ ಮೊದಲ ಬಾರಿಗೆ ಮುಂದಾಗಿದೆ. ಈ ಮೂಲಕ ಮಲೆನಾಡಿನ ಪ್ರಕೃತಿ ಸೌಂದರ್ಯ ಸವಿಯಲು ಪ್ರಯಾಣಿಕರಿಗೆ ಅವಕಾಶ ದೊರೆಯಲಿದೆ.
ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲಿಗೆ ಅಳವಡಿಸಲಾಗಿರುವ ಗಾಜಿನ ಛಾವಣಿಯನ್ನು ಹೊಂದಿರುವ ವಿಸ್ಟಾಡೋಮ್ ಕೋಚ್ ಅನ್ನು ಈ ಮಾರ್ಗದಲ್ಲೂ ಅಳವಡಿಸುವ ಮೂಲಕ ಪ್ರಯಾಣಿಕರು ನಿಸರ್ಗದ ಸೌಂದರ್ಯ ಸವಿಯುವ ಅವಕಾಶ ಕಲ್ಪಿಸಲಾಗುವುದು ಎಂದು ನೈಋತ್ಯ ರೈಲ್ವೆಯು ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ
Advertisement
Advertisement
ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲು ಸಂಖ್ಯೆ 16579/ 16580 ಯಶವಂತಪುರ- ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್‍ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ವಿಸ್ಟಾಡೋಮ್ ಕೋಚ್ ಆಳವಡಿಕೆ ಮಾಡಲಾಗುತ್ತದೆ.
Advertisement
Advertisement
ಪ್ರತಿದಿನ ಸಂಚಾರ ನಡೆಸುವ ರೈಲುಗಳಿಗೆ ಹವಾನಿಯಂತ್ರಿತ ವಿಸ್ಟಾಡೋಮ್ ಬೋಗಿಗಳನ್ನು ತಾತ್ಕಾಲಿಕವಾಗಿ ಅಳವಡಿಸಲಾಗುವುದು. ಇದು ಯಶಸ್ವಿಯಾದರೆ ಇದನ್ನು ಕಾಯಂ ಆಗಿ ಉಳಿಸಿಕೊಳ್ಳುವ ಬಗ್ಗೆ ಗಮನ ಹರಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಇದನ್ನೂ ಓದಿ: ಕ್ರಿಸ್‍ಮಸ್ ಮೂಡ್ ನಲ್ಲಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ಕಿಡ್ಸ್
ಶಿವಮೊಗ್ಗ ಮತ್ತು ಯಶವಂತಪುರ ರೈಲಿಗೆ ಅಳವಡಿಸಲಾಗುವ ವಿಸ್ಟಾಡೋಮ್ ಬೋಗಿಯ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣ ಈ ಬೋಗಿಯಲ್ಲಿ ಕೇವಲ 44 ಆಸನಗಳು ಇರುತ್ತವೆ. ಅಲ್ಲದೇ ಸೀಟುಗಳು 180 ಡಿಗ್ರೀ ತಿರುಗಲಿದ್ದು, ಸಂಪೂರ್ಣ ಹವಾ ನಿಯಂತ್ರಿತವಾಗಿರುತ್ತವೆ.