ಮೈಸೂರು: ಜಯ ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದ್ದು, ಪ್ರಾಣಿ ವಿನಿಮಯ ಪದ್ಧತಿಯಡಿ ವಿವಿಧ ಪ್ರಾಣಿಗಳನ್ನು ಮೃಗಾಯಲಕ್ಕೆ ತರಲಾಗಿದೆ.
ಅಸ್ಸಾಂನ ಗುವಾಹತಿ ಮೃಗಾಲಯದಿಂದ ಒಂದು ಹೆಣ್ಣು ಘೇಂಡಾಮೃಗ, ಒಂದು ಕಪ್ಪು ಚಿರತೆ, ಒಂದು ಜೋಡಿ ಹೂಲಾಕ್ ಗಿಬ್ಬನ್ ಪ್ರಾಣಿಗಳು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ. ಪ್ರಾಣಿ ವಿನಿಮಯ ಪದ್ಧತಿಯಡಿ ಮೈಸೂರು ಮೃಗಾಲಯದಿಂದ ಜಯಚಾಮರಾಜೇಂದ್ರ ಎಂಬ ಹೆಸರಿನ ಗಂಡು ಜಿರಾಫೆಯನ್ನು ಗುವಾಹಟಿ ಮೃಗಾಲಯಕ್ಕೆ ನೀಡಿ ಅಲ್ಲಿಂದ ಈ ಪ್ರಾಣಿಗಳನ್ನು ಮೈಸೂರು ಮೃಗಾಲಯಕ್ಕೆ ಪಡೆಯಲಾಗಿದೆ.
Advertisement
Advertisement
ಗುವಾಹಟಿ ರಸ್ತೆ ಮಾರ್ಗವಾಗಿ ಪ್ರಾಣಿಗಳನ್ನು ಮೈಸೂರು ಮೃಗಾಲಯಕ್ಕೆ ಸುರಕ್ಷಿತವಾಗಿ ತರಲಾಗಿದೆ. ಒಂದು ವಾರಗಳ ಕಾಲ ಈ ಪ್ರಾಣಿಗಳನ್ನು ಇಲ್ಲಿನ ಪರಿಸರಕ್ಕೆ ಹೊಂದಿಸುವ ಕಾರ್ಯ ನಡೆಸಲಾಗುತ್ತೆ. ನಂತರ ಇವುಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತೆ. ಅಲ್ಲಿಗೆ ಈ ವರ್ಷಾಂತ್ಯಕ್ಕೆ ಮೈಸೂರಿಗೆ ನೀವು ಪ್ರವಾಸಕ್ಕೆ ಬಂದರೆ ಈ ಹೊಸ ಅತಿಥಿಗಳನ್ನು ನೀವು ನೋಡಬಹುದಾಗಿದೆ. ಇದನ್ನು ಓದಿ: ಮೈಸೂರು ಝೂ ವಿಚಾರದಲ್ಲಿ ಸಿಹಿ-ಕಹಿ ಸುದ್ದಿ