ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿ ನಟ ದರ್ಶನ್ (Actor Darshan) ನಿನ್ನೆ (ಅ.30) ಬಳ್ಳಾರಿ ಜೈಲಿನಿಂದ (Ballary Jail) ರಿಲೀಸ್ ಆಗಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ 2 ತಿಂಗಳು ಕಳೆದು ನಿನ್ನೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಒಂದು ಕಡೆ ಜೈಲಿಗೆ ಹೊಂದಿಕೊಳ್ಳಲು ಕಷ್ಟವಾದರೆ ಇನ್ನೊಂದು ಕಡೆ ಬೆನ್ನು ನೋವು ಬೇತಾಳ ತರಹ ಕಾಡುತ್ತಿತ್ತು.
ಇದೀಗ ಬೆನ್ನು ನೋವಿಗೆ ಸರ್ಜರಿ ಸಲುವಾಗಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಿನ್ನೆ ಸಂಜೆ ಬಳ್ಳಾರಿ ಜೈಲಿಂದ ನೇರವಾಗಿ ಬೆಂಗಳೂರಿನ ಪತ್ನಿ ವಿಜಯಲಕ್ಷ್ಮಿ ಫ್ಲ್ಯಾಟ್‌ಗೆ ದರ್ಶನ್ ಬಂದಿಳಿದಿದ್ದಾರೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 31-10-2024
ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕ ಬಳಿಕ ಸಂಜೆ ವೇಳೆಗೆ ಬಳ್ಳಾರಿ ಜೈಲಿಂದ ದರ್ಶನ್ ಬಿಡುಗಡೆಯಾದರು. ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್, ಸಂಬಂಧಿ ಸುಶಾಂತ್ ನಾಯ್ಡು ಜೊತೆಗೆ ಬೆಂಗಳೂರಿಗೆ ಸುದೀರ್ಘ ಪ್ರಯಾಣ ಬೆಳೆಸಿದರು. ದಾರಿಯುದ್ದಕ್ಕೂ ದರ್ಶನ್ ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ದಾಸನಿಗೆ ಜೈಕಾರ ಹಾಕಿದರು. ಈ ವೇಳೆ ದರ್ಶನ್ ಅಭಿಮಾನಿಗಳತ್ತ ಕೈ ಬೀಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಬಳ್ಳಾರಿ, ಅನಂತಪುರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಜಗಳಪುರ, ಚದಲಾಪುರ, ದೇವನಹಳ್ಳಿ, ಹುಣಸಮಾರನಹಳ್ಳಿ, ಹೆಬ್ಬಾಳ, ಮಲ್ಲೇಶ್ವರಂ, ನವರಂಗ್, ಮೈಸೂರು ರೋಡ್ ಮೂಲಕ ಹೊಸಕೆರೆಹಳ್ಳಯ ಪತ್ನಿ ಅಪಾರ್ಟ್ಮೆಂಟ್‌ಗೆ ಭೇಟಿ ನೀಡಿದರು.
ದರ್ಶನ್ ವಿಜಯಲಕ್ಷ್ಮಿ ಫ್ಲ್ಯಾಟ್‌ಗೆ ಬರ್ತಿದ್ದಕ್ಕೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಸಂಭ್ರಮಾಚರಣೆ ಮಾಡಿದರು. `ಡಿ ಬಾಸ್ ಡಿ ಬಾಸ್’ ಎಂದು ಜೈಕಾರ ಹಾಕಿದರು. ಈ ವೇಳೆ ದರ್ಶನ್ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿಲೇಬೇಕಾದ ಪರಿಸ್ಥಿತಿ ಎದುರಾಯಿತು.
ದಾಸ 5 ತಿಂಗಳ ಬಳಿಕ ಜೈಲಿಂದ ಬಿಡುಗಡೆ ಆಗಿದ್ದು, ಮಧ್ಯಂತರ ಜಾಮೀನು ಪಡೆದಿದ್ದಾರೆ. ಇಂದು (ಅ.31) ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಇಂದು ಪುತ್ರ ವಿನೀಶ್ ಹುಟ್ಟುಹಬ್ಬ ಇದ್ದು, ಮಗನ ಹುಟ್ಟುಹಬ್ಬ ಆಚರಣೆ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.ಇದನ್ನೂ ಓದಿ: ದಿನ ಭವಿಷ್ಯ 31-10-2024