ಭಾರತೀಯ ಸಿನಿಮಾ ರಂಗದ ಮೋಸ್ಟ್ ಡೆಡ್ಲಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಅವರನ್ನು ಉಪೇಂದ್ರ ಭೇಟಿ ಮಾಡಿದ್ದಾರೆ. ಈ ಕುರಿತು ಸ್ವತಃ ರಾಮ್ ಗೋಪಾಲ್ ವರ್ಮಾ ಟ್ವಿಟ್ ಮಾಡಿ, ಉಪೇಂದ್ರ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇತ್ತ ರಾಮ್ ಗೋಪಾಲ್ ವರ್ಮಾ ಹಸಿ ಹಸಿ ಕಾಮನೆಗಳ ಚಿತ್ರ ಮಾಡುತ್ತಿದ್ದಾರೆ, ಅತ್ತ ಉಪೇಂದ್ರ ಹೊಸ ಸಿನಿಮಾದ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿನ ಭೇಟಿ ಭಾರೀ ಕುತೂಹಲವನ್ನಂತೂ ಮೂಡಿಸಿದೆ. ಇದನ್ನೂ ಓದಿ : ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ
Advertisement
ಉಪೇಂದ್ರ ನಿರ್ದೇಶನ ಮಾಡಲಿರುವ ಸಿನಿಮಾ ಬಜೆಟ್ ಗಾತ್ರ ದೊಡ್ಡದು. ಅಲ್ಲದೇ, ದಕ್ಷಿಣದ ತಾರೆಯರು ಕೂಡ ಈ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ. ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾಗೆ ಬೇಕಾಗಿದ್ದರಿಂದ, ಆಡಿಷನ್ ಕೂಡ ನಡೆದಿದೆ. ಅಷ್ಟೊಂದು ಕಲಾವಿದರನ್ನು ಹುಡುಕುವುದು ಕಷ್ಟಸಾಧ್ಯವಾಗಿದ್ದರಿಂದ ಎರಡು ತಿಂಗಳುಗಳ ಕಾಲ ಕಲಾವಿದರ ಹುಡುಕಾಟಕ್ಕೆ ಅವರು ಮೀಸಲಿಟ್ಟಿದ್ದಾರಂತೆ. ಇದನ್ನೂ ಓದಿ : ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್
Advertisement
Advertisement
ಈಗಾಗಲೇ ಸಿನಿಮಾದ ಟೈಟಲ್ ಕೂಡ ಲಾಂಚ್ ಮಾಡಿದ್ದಾರೆ ಉಪೇಂದ್ರ. ಈ ಟೈಟಲ್ ಅನ್ನು ಹೇಗೆ ಕರೆಯಬೇಕು ಎನ್ನುವ ಗೊಂದಲದಲ್ಲಿದ್ದಾರೆ ಅಭಿಮಾನಿಗಳು. ಅದೊಂದು ಧಾರ್ಮಿಕ ಚಿಹ್ನೆಯೂ ಆಗಿರುವುದರಿಂದ ಮತ್ತು ‘ಯು’ ಹಾಗೂ ‘ಐ” ಇಂಗ್ಲಿಷ್ ಅಕ್ಷರಗಳು ಇರುವುದರಿಂದ ನಿಮಗೆ ಇಷ್ಟ ಬಂದಂತೆ ಕರೆದುಕೊಳ್ಳಿ ಎನ್ನುವಂತೆ ಅಭಿಮಾನಿಗಳಿಗೆ ಬಿಟ್ಟಿದ್ದಾರೆ. ಇದನ್ನೂ ಓದಿ : ಖ್ಯಾತ ಗಾಯಕ ರಘು ದೀಕ್ಷಿತ್ ತಾಯಿ ನಿಧನ : ದುಬೈನಲ್ಲಿದ್ದಾರೆ ರಘು
Advertisement
‘ನೀನು’ ಮತ್ತು ‘ನಾನು’ ಎನ್ನುವ ಎರಡು ಗೂಢಾರ್ಥದ ಶಬ್ದಗಳೊಂದಿಗೆ ಈವರೆಗೂ ಸಿನಿಮಾ ಮಾಡಿರುವ ಉಪೇಂದ್ರ, ಹೊಸ ಸಿನಿಮಾದಲ್ಲೂ ಅದೇ ಹುಳು ಬಿಟ್ಟಿದ್ದಾರೆ. ಈ ಎರಡೇ ಶಬ್ದಗಳಲ್ಲಿ ಇಡೀ ಸಿನಿಮಾ ಅಡಗಿದೆ ಎನ್ನಲಾಗುತ್ತಿದೆ. ಆದರೆ, ಈವರೆಗೂ ಉಪೇಂದ್ರ ಹೊಸ ಸಿನಿಮಾದ ಕಥೆಯ ಬಗ್ಗೆ ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ
ಈ ಎಲ್ಲದನ್ನು ಗಮನಿಸಿದಾಗ ರಾಮ್ ಗೋಪಾಲ್ ವರ್ಮಾ ಜತೆ ಉಪೇಂದ್ರ ಇನ್ನೇನು ಚರ್ಚೆ ಮಾಡಿರಬಹುದು ಎನ್ನುವ ಕ್ಯೂರಿಯಾಸಿಟಿಯಂತೂ ಅಭಿಮಾನಿಗಳಲ್ಲಿ ಮೂಡಿದೆ. ಯಾವತ್ತಾದರೂ ಒಂದು ದಿನ ರಾಮ್ ಗೋಪಾಲ್ ವರ್ಮಾ ಈ ಗುಟ್ಟನ್ನು ರಟ್ಟು ಮಾಡುವುದಂತೂ ಗ್ಯಾರಂಟಿ.