ಭಾರತೀಯರು ಆಚರಿಸುವ ವಿಶೇಷ ಹಬ್ಬಗಳಲ್ಲಿ ಶಿವರಾತ್ರಿಯೂ ಒಂದು. ಶಿವರಾತ್ರಿ ಎಂದರೆ ನೆನಪಾಗುವುದೇ ಜಾಗರಣೆ. ಅಂದು ಈಶ್ವರನನ್ನು ಭಕ್ತಿಪೂರ್ವಕವಾಗಿ ಪೂಜಿಸಲಾಗುತ್ತದೆ. ಶಿವರಾತ್ರಿಯಂದು ನೀವೂ ಯಾವುದಾದರೂ ವಿಶೇಷ ಶಿವನ ದೇವಾಲಯಕ್ಕೆ ಭೇಟಿ ನೀಡಬೇಕು ಎಂದು ಅಂದುಕೊಂಡಿದ್ದೀರಾ? ಹಾಗಾದರೆ ನೀವು ಕೋಲಾರ ಜಿಲ್ಲೆಯಲ್ಲಿರುವ ಕೋಟಿಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಬಹುದು.
Advertisement
ಭಾರತದ ಸೇರಿದಂತೆ ವಿಶ್ವದ ಮೂಲೆ ಮೂಲೆಗಳಲ್ಲೂ ಶಿವನ ಮಂದಿರಗಳು ಇವೆ. ನಮ್ಮ ದೇಶದಲ್ಲಿ ಎಲ್ಲಾ ದೇವರು ಮತ್ತು ದೇವತೆಗಳ ವಿಶಿಷ್ಟ ಮತ್ತು ವಿಶೇಷ ದೇವಾಲಯಗಳನ್ನು ವಿವಿಧೆಡೆ ನಿರ್ಮಾಣ ಮಾಡಲಾಗಿದೆ. ದಕ್ಷಿಣ ಭಾರತದಲ್ಲಿ ಅಂತಹ ಒಂದು ವಿಶಿಷ್ಟ ದೇವಾಲಯವೆಂದರೆ ಕೋಲಾರ ಜಿಲ್ಲೆಯಲ್ಲಿರುವ ಕೋಟಿಲಿಂಗೇಶ್ವರ ದೇವಾಲಯ. ಹೆಸರೇ ಸೂಚಿಸುವಂತೆ, ಈ ದೇವಾಲಯದಲ್ಲಿ ಒಂದು ಕೋಟಿ ಶಿವಲಿಂಗಗಳಿವೆ.
Advertisement
ಕೋಟಿಲಿಂಗೇಶ್ವರ ದೇವಾಲಯದ ಇತಿಹಾಸ:
ಗೌತಮ ಋಷಿಯ ಶಾಪ ವಿಮೋಚನೆಗಾಗಿ ದೇವರಾಜ ಇಂದ್ರನು ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ ನಂತರ ಅದನ್ನು ಪವಿತ್ರಗೊಳಿಸಿದನು ಎಂಬುದು ಇಲ್ಲಿನ ನಂಬಿಕೆಯಾಗಿದೆ. ಈ ದೇವಾಲಯವು ಕರ್ನಾಟಕದ ಕೋಲಾರ ಜಿಲ್ಲೆಯ ಕಮ್ಮಸಂದ್ರ ಎಂಬ ಹಳ್ಳಿಯಲ್ಲಿದೆ. ಶಿವಲಿಂಗ ರೂಪದಲ್ಲಿ ನಿರ್ಮಿಸಲಾದ ಈ ದೇವಾಲಯದ ಎತ್ತರವು 108 ಅಡಿಗಳಿಷ್ಟಿದೆ. ಮುಖ್ಯ ಶಿವಲಿಂಗವನ್ನು ಹೊರತುಪಡಿಸಿ, ಲಕ್ಷಾಂತರ ಶಿವಲಿಂಗವನ್ನು ಈ ದೇವಾಲಯದಲ್ಲಿ ಸ್ಥಾಪಿಸಲಾಗಿದೆ.
Advertisement
Advertisement
ಈ ದೇವಾಲಯವನ್ನು 1980 ರಲ್ಲಿ ಸ್ವಾಮಿ ಸಾಂಭ ಶಿವ ಮೂರ್ತಿ ಮತ್ತು ಅವರ ಪತ್ನಿ ರುಕ್ಮಿಣಿ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ಪತಿ ಪತ್ನಿಯರಿಬ್ಬರೂ ಸೇರಿ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು. 5 ಶಿವಲಿಂಗದ ಬಳಿಕ ಇಲ್ಲಿ 101 ಶಿವಲಿಂಗ ಮತ್ತು 1001 ಶಿವಲಿಂಗವನ್ನು ನಿರ್ಮಿಸಲಾಗಿದೆ. ಇಲ್ಲಿ ಒಂದು ಕೋಟಿ ಶಿವಲಿಂಗವನ್ನು ಸ್ಥಾಪಿಸಬೇಕೆಂಬುದು ಸ್ವಾಮೀಜಿಯವರ ಕನಸಾಗಿತ್ತು. ಆದರೆ ಸ್ವಾಮಿಗಳು 2018 ರಲ್ಲಿ ನಿಧನರಾದರು. 1994 ರಲ್ಲಿ 108 ಅಡಿ ಉದ್ದದ ಶಿವಲಿಂಗವನ್ನು ನಿರ್ಮಿಸಲಾಗಿದೆ. ಅಲ್ಲದೇ, ನಂದಿಯ ಬೃಹತ್ ಪ್ರತಿಮೆಯನ್ನೂ ಕಾಣಬಹುದು.
ಈ ದೇವಾಲಯದ ಆವರಣದಲ್ಲಿ ಕೋಟಿಲಿಂಗೇಶ್ವರವನ್ನು ಹೊರತುಪಡಿಸಿ ಇನ್ನೂ 11 ದೇವಾಲಯಗಳಿವೆ. ಈ ದೇವಾಲಯದಲ್ಲಿ ಮುಖ್ಯವಾಗಿ ಬ್ರಹ್ಮ, ವಿಷ್ಣು, ಅನ್ನಪೂರ್ಣೇಶ್ವರಿ ದೇವಿ, ವೆಂಕಟರಮಣಿ ಸ್ವಾಮಿ, ಪಾಂಡುರಂಗ ಸ್ವಾಮಿ, ಪಂಚಮುಖ ಗಣಪತಿ, ರಾಮ, ಲಕ್ಷ್ಮಣ, ಸೀತಾ ಪೂಜಿಸಲಾಗುತ್ತದೆ.
ಕೋಟಿಲಿಂಗೇಶ್ವರ ದೇವಾಲಯದಲ್ಲಿ ಶಿವಲಿಂಗಗಳ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಆಸೆ ಈಡೇರಿದಾಗ ಭಕ್ತರು ಇಲ್ಲಿಗೆ ಬಂದು ಶಿವಲಿಂಗವನ್ನು ಸ್ಥಾಪಿಸುತ್ತಾರೆ ಎನ್ನುವ ನಂಬಿಕೆಯಿದೆ. ಆದ್ದರಿಂದ, ದೇವಾಲಯದಲ್ಲಿ ಶಿವಲಿಂಗಗಳ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಈ ದೇವಾಲಯಕ್ಕೆ ಮಹಾಶಿವರಾತ್ರಿಯಂದು ಜನಸಾಗರವೇ ಹರಿದುಬರುತ್ತದೆ.
ಬೆಂಗಳೂರಿನಿಂದ 90 ಕಿಲೋ ಮೀಟರ್ ದೂರದ ಕೋಲಾರದಲ್ಲಿ ಈ ವಿಶ್ವವಿಖ್ಯಾತ ಕೋಟಿಲಿಂಗೇಶ್ವರ ದೇವಾಲಯವಿದೆ. ಬೆಂಗಳೂರಿನಿಂದ ದೇವಸ್ಥಾನಕ್ಕೆ ತೆರಳಲು ಸುಮಾರು ಎರಡೂವರೆ ಗಂಟೆ ಪ್ರಯಾಣವಿದೆ.