– ಅಹಂಕಾರದ ನಡವಳಿಕೆಯಿಂದ ಸಿದ್ದರಾಮಯ್ಯ ರಾಜ್ಯದ ಜನತೆಗೆ ಅವಮಾನ ಮಾಡ್ತಿದ್ದಾರೆ ಎಂದ ಸಂಸದ
ಕಾರವಾರ: ರಾಜ್ಯದ ಕಾಂಗ್ರೆಸ್ (Congress) ಸರ್ಕಾರ ರಾಷ್ಟ್ರದ್ರೋಹದ ಅಪರಾಧಿಗಳನ್ನು ರಕ್ಷಿಸುತ್ತಿದೆ. ರಾಷ್ಟ್ರದ್ರೋಹದ ಪ್ರಕರಣ ಹಿಂಪಡೆಯುವುದರ ಮೂಲಕ ಅಪರಾಧಿಗಳ ರಕ್ಷಣೆಗೆ ನಾವಿದ್ದೇವೆ ಎಂಬ ಸ್ಪಷ್ಟ ಸಂದೇಶ ಕಾಂಗ್ರೆಸ್ ನೀಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಕಿಡಿಕಾರಿದರು.
ಶಿರಸಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯ (Hubballi Riots) ಪ್ರಕರಣವನ್ನು ಹಿಂಪಡೆದು ಕಾಂಗ್ರೆಸ್ ಸರ್ಕಾರ ದೊಡ್ಡ ಅಪರಾಧ ಮಾಡಿದೆ. ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬಾರದು ಎಂದು ಕಾಂಗ್ರೆಸ್ ಓಲೈಕೆಯ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ಎಂಪಿಗಳಿಗೆ ಮೋದಿ, ಅಮಿತ್ ಶಾ ಕಂಡ್ರೆ ಭಯ: ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಕಾಂಗ್ರೆಸ್‌ಗೆ ಹಿಂದೂಗಳ ಕುರಿತು ಮಾತನಾಡುವಾಗ ಜಾತಿಯೇ ಮುಖ್ಯವಾಗುತ್ತದೆ. ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದಲ್ಲಿ ಅನೇಕ ಜಾತಿಗಳಿವೆ. ಅಲ್ಲಿ ಯಾಕೆ ಜಾತಿಗಣತಿ ನಡೆಸುತ್ತಿಲ್ಲ. ಕಾಂಗ್ರೆಸ್‌ನ ಷಡ್ಯಂತ್ರಕ್ಕೆ ಅಲ್ಪಸಂಖ್ಯಾತರು ಬಲಿಯಾಗಬಾರದು. ರಾಜ್ಯದ ಕಾಂಗ್ರೆಸ್ ಬ್ರಿಟಿಷ್ ಮಾನಸಿಕತೆ ಬೆಳೆಸಿಕೊಂಡಿದೆ ಎಂದರು.
ರಾಜ್ಯದಲ್ಲಿ ಸರ್ಕಾರವಿದೆ. ಆದರೆ ಆಡಳಿತ ಶೂನ್ಯವಾಗಿದೆ. ರಾಜಕೀಯ ದ್ವೇಷ, ಸೇಡಿನ ರಾಜಕಾರಣದಲ್ಲಿ ಕಾಂಗ್ರೆಸ್ ಮುಳುಗಿದೆ. ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಓಲೈಕೆ ರಾಜಕಾರಣ, ಭ್ರಷ್ಟಾಚಾರ ಸರ್ಕಾರೀಕರಣವಾಗಿದೆ. ಅಹಂಕಾರದ ನಡವಳಿಕೆಯಿಂದ ಸಿದ್ದರಾಮಯ್ಯ ರಾಜ್ಯದ ಜನತೆಗೆ ಅವಮಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ತಾಕತ್ತಿದ್ದರೆ ತನಿಖೆ ಎದುರಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಏನೇ ಆಗಲಿ ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಾನೇ – ಹೆಚ್‌ಡಿಕೆ