ರಾಯಚೂರು: ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮೌಲ್ಯ, ಆದರ್ಶಗಳು ಅಧಃಪತನವಾಗುತ್ತಿದ್ದು, ಶಾಸಕಾಂಗ ಇಂದು ರಂಜನೀಯ ವಿಷಯವಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು.
ಕೃಷಿ ವಿವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸುಧಾರಣಾ ಕ್ರಮ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಚರ್ಚೆ ನೋಡಿದಾಗ ಇಂದಿನ ಸರ್ಕಾರಗಳು ಉಳ್ಳವರ ಪರ ಸರ್ಕಾರವಾಗಿವೆ ಎಂದು ಸ್ಪಷ್ಟವಾಗುತ್ತಿದೆ. ಹಿಂದೆ ಬಡವರ ಕಷ್ಟ, ಸಮಸ್ಯೆಗಳ ಪರಿಹಾರಕ್ಕಾಗಿ ಚರ್ಚೆ ನಡೆಯುತ್ತಿತ್ತು. ಆದರೆ ಇಂದು ಜನರ ಆಶೋತ್ತರಗಳನ್ನು ಈಡೇರಿಸಲಾಗದ ಸ್ಥಿತಿಯಲ್ಲಿದೆ. ಕಾರ್ಯಾಂಗ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದ ಅವರು, ವಿಳಂಬ ನೀತಿ, ಬ್ರಿಟಿಷ್ ವ್ಯವಸ್ಥೆಯಿಂದ ಹೊರಬರಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
Advertisement
ಮೌಲ್ಯಗಳ ಆದರ್ಶಗಳ ಅಧಃಪತನಕ್ಕೆ ಚುನಾವಣೆಗಳು ಮುಖ್ಯ ಪಾತ್ರ ವಹಿಸುತ್ತಿದೆ. ಮೇಲ್ಮನೆ ಚುನಾವಣೆಯಲ್ಲೂ ನೋವಿನ ಸಂಗತಿಗಳು ನಡೆದಿವೆ. ನ್ಯಾಯ ಸಮ್ಮತವಾದ ಚುನಾವಣೆ ನಡೆಸಬೇಕು. ಚರ್ಚೆಗಳು, ಸಂವಾದಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ದೋಷ ಸರಿಪಡಿಸಬೇಕಿದೆ. ಹಣಬಲ, ತೋಳ್ಬಲ, ಜಾತಿ, ಪಕ್ಷಾಂತರದಿಂದ ಸಮರ್ಥ ಆಡಳಿತ ಕೊಡಲು ಸಾಧ್ಯವಿಲ್ಲದಂತಾಗಿದೆ. ಇದರಿಂದಾಗಿ ಚುನಾವಣಾ ಆಯೋಗ ವರ್ಷಪೂರ್ತಿ ಕ್ರಿಯಾಶೀಲ ಆಗಬೇಕಿದೆ ಎಂದರು. ಇದನ್ನೂ ಓದಿ: ನಕಲಿ ಛಾಪಾ ಕಾಗದ ಹಗರಣ ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ
Advertisement
Advertisement
ಭ್ರಷ್ಟ, ಅಸಮರ್ಥ ಜನಪ್ರತಿನಿಧಿಗಳನ್ನು ತಿರಸ್ಕರಿಸುವ ಹಕ್ಕು ಮತದಾರರಿಗೆ ನೀಡಬೇಕು. ಚುನಾವಣೆ ಭ್ರಷ್ಟಾಚಾರ ತಡೆಯಬೇಕು ಎಂದು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಸಲಹೆ ನೀಡಿದರು. ಇದನ್ನೂ ಓದಿ: ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ