ಬೆಂಗಳೂರು: ಚಿಕ್ಕಬಳ್ಳಾಪುರ (Chikkaballapura) ಲೋಕಸಭಾ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ (K Sudhakar) ಹಾಗೂ ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ನಡುವೆ ಮುನಿಸು ಮುಂದುವರಿದಿದೆ. ವಿಶ್ವನಾಥ್ ಅವರನ್ನು ಭೇಟಿ ಮಾಡಲೆಂದು ಅವರ ನಿವಾಸಕ್ಕೆ ಆಗಮಿಸಿದ ಸುಧಾಕರ್ ಅನ್ನು ಭೇಟಿ ಮಾಡದೇ ಯಲಹಂಕ ಶಾಸಕ ರೆಬೆಲ್ ನಡೆ ತೋರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಶಾಸಕ ಎಸ್‌ಆರ್ ವಿಶ್ವನಾಥ್ ರೆಬೆಲ್ ಆಗಿದ್ದಾರೆ. ಟಿಕೆಟ್ ಘೋಷಣೆಯಾಗಿ ವಾರವಾದರೂ ವಿಶ್ವನಾಥ್ ಮುನಿಸು ಮುಗಿದಿಲ್ಲ. ವಿಶ್ವನಾಥ್ ಪುತ್ರ ಅಲೋಕ್‌ಗೆ ಚಿಕ್ಕಬಳ್ಳಾಪುರ ಟಿಕೆಟ್ ಕೇಳಿದ್ದರು. ಟಿಕೆಟ್ ಕೈತಪ್ಪಿದ ಹಿನ್ನೆಲೆ ವಿಶ್ವನಾಥ್ ಅಸಮಧಾನಗೊಂಡಿದ್ದಾರೆ. ಅಲ್ಲದೇ ಸುಧಾಕರ್‌ಗೆ ಬೆಂಬಲ ಕೊಡದಿರಲು ಎಸ್‌ಆರ್ ವಿಶ್ವನಾಥ್ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕಚ್ಚತೀವು ಪ್ರದೇಶವನ್ನು ಕಾಂಗ್ರೆಸ್ ಶ್ರೀಲಂಕಾಗೆ ನೀಡಿದೆ – ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ RTI ಉತ್ತರ
Advertisement
Advertisement
ಈ ಮಧ್ಯೆ ಖುದ್ದು ಸುಧಾಕರ್ ತಮ್ಮ ನಿವಾಸಕ್ಕೆ ಬಂದರೂ ಸಹ ವಿಶ್ವನಾಥ್ ಅವರನ್ನು ಭೇಟಿ ಮಾಡಿಲ್ಲ. ಪಕ್ಷದ ಅಭ್ಯರ್ಥಿ ಮನೆಗೆ ಬಂದರೂ ಎದುರುಗೊಳ್ಳದೇ ಯಲಹಂಕ ಶಾಸಕ ರೆಬೆಲ್ ನಡೆ ತೋರಿದ್ದಾರೆ. ಸುಧಾಕರ್ ಜೊತೆ ಒಡನಾಟವೇ ಬೇಡ ಎಂಬ ತೀರ್ಮಾನಕ್ಕೆ ವಿಶ್ವನಾಥ್ ಬಂದಿದ್ದಾರೆ. ಚಿಕ್ಕಬಳ್ಳಾಪುರ ಭಿನ್ನಮತ ತೀವ್ರ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಲ್ಲಿ ಆತಂಕ ಹೆಚ್ಚಾಗಿದೆ. ಎಸ್‌ಆರ್ ವಿಶ್ವನಾಥ್ ಭೇಟಿ ಮಾಡಲು ಒಪ್ಪದ ಹಿನ್ನೆಲೆ ಸುಧಾಕರ್‌ಗೆ ಮುಜುಗರವುಂಟಾಗಿ ವಾಪಸ್ ತೆರಳಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು
Advertisement
ಈ ಕುರಿತು ಸುಧಾಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ ನಮ್ಮ ಸ್ನೇಹಿತರು. ಹಲವಾರು ಸಲ ನಾನು ಕರೆ ಮಾಡಿದ್ದೆ, ಮೆಸೇಜ್ ಮಾಡಿದ್ದೆ. ಅದಕ್ಕೆ ಯಾವುದೇ ಉತ್ತರ ಇಲ್ಲ. ಯಾವುದಕ್ಕೂ ಸ್ಪಂದಿಸಿರಲಿಲ್ಲ. ನಮ್ಮ ನಾಯಕರು ಯಡಿಯೂರಪ್ಪ ಅವರು ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಇದೇ ಚುನಾವಣೆ ಕೊನೆಯಲ್ಲ. ನಮ್ಮ ನಾಯಕರು ಸಮಸ್ಯೆ ಬಗೆಹರಿಸುತ್ತಾರೆ. ಇದರ ನಡುವೆ ನಮ್ಮ ಅವರ ಭೇಟಿ ಸಾಧ್ಯವಾಗಿಲ್ಲ. ಕೆಲವು ರಾಜಕಾರಣದಲ್ಲಿ ಎಲ್ಲವು ಸರಾಗವಾಗಿ ನಡೆದರೆ ಅದು ರಾಜಕಾರಣವಲ್ಲ. ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗಬೇಕು. ನನ್ನ ಮತ್ತು ಅವರ ನಡುವೆ ವೈಯಕ್ತಿಕ ಕಲಹಗಳು ಏನು ಇಲ್ಲ. ನಾನು ಸೇರಿ ಮೋದಿ ಅವರ ಹೆಸರು ಹೇಳಿ ಮತ ಕೇಳುತ್ತಿರೋದು. ಏ.4ರಂದು ನಾಮಪತ್ರ ಸಲ್ಲಿಸುತ್ತೇನೆ. ಚಿಕ್ಕಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಅಧಿಕೃತ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಸುಮಲತಾರನ್ನು ಭೇಟಿಯಾಗಲಿದ್ದಾರೆ ಹೆಚ್‌ಡಿಕೆ
Advertisement
ಈ ಕುರಿತು ಎಸ್‌ಆರ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದು, ಮಾಧ್ಯಮದವರಿಗೆ ಮಾಹಿತಿ ನೀಡಿದರೆ ಸಾಕೇ? ನಮ್ಮ ಮನೆಗೆ ಬರುವಾಗ ನನಗೆ ಹೇಳೋದು ಬೇಡ್ವಾ? ನಾನ್ಯಾಕೆ ಒಬ್ಬನೇ ಮಾತಾಡಲಿ? ಹೇಳಿದ್ದರೆ ಕಾರ್ಯಕರ್ತರನ್ನು ಸೇರಿಸಿ ಅವರ ಎದುರೇ ಮಾತನಾಡುತ್ತಿದ್ದೆ. ಅಮಿತ್ ಶಾ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಅಮಿತ್ ಶಾ ಕಾರ್ಯಕ್ರಮದ ತಯಾರಿಗಳನ್ನು ನೋಡಿಕೊಳ್ಳಲು ತೆರಳುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಿಗೆ ಬಾರದೇ ಇರಲು ಸರ್ಕಾರದಿಂದಲೇ ಕಡತ ಕಳ್ಳತನ : ಬಿಜೆಪಿ ಕಿಡಿ