ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

Public TV
1 Min Read
HUBBALLI ANJALI SISTER

ಹುಬ್ಬಳ್ಳಿ: ಆರೋಪಿ ವಿಶ್ವನಿಗೂ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ ಎಂದು ಮೃತ ಅಂಜಲಿ ಅಂಬಿಗೇರ (Anjali Ambigera) ಸಹೋದರಿ ಸ್ಪಷ್ಟನೆ ನೀಡಿದ್ದಾಳೆ.

ಆರೋಪಿ ಬಂಧನ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶೋಧ, ಆರೋಪಿ ವಿಶ್ವನನ್ನು ಆಸ್ಪತ್ರೆಗೆ ಸೇರಿಸಿ ಯಾಕೆ ಚಿಕಿತ್ಸೆ ನೀಡುತ್ತಿದ್ದೀರಿ. ನಮ್ಮ ಅಕ್ಕ ಹೇಗೆ ರಕ್ತ ಹರಿದು ನರಳಿ ನರಳಿ ಸತ್ತಳೊ ಹಾಗೇ ಅವನು ಸಾಯಲಿ ಎಂದು ಆಕ್ರೋಶ ಹೊರಹಾಕಿದ್ದಾಳೆ.

HUBBALLI ANJALI MURDER 2

ನಮ್ಮ ಅಕ್ಕನ ರಕ್ತ ಹರಿದಷ್ಟು ಅವನಿಂದ ಹರಿಯಲಿ. ವಿಶ್ವನಿಗೆ ಹಾಗೂ ನಮ್ಮ ಅಕ್ಕನಿಗೆ ಯಾವುದೇ ಸಂಬಂಧ ಇಲ್ಲ. ಅವಳು ಸತ್ತ ಮೇಲೆ ಈ ರೀತಿ ಕಥೆ ಹುಟ್ಟುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದಳು. ಇದನ್ನೂ ಓದಿ: ಅಂಜಲಿ ಬಳಿಕ ರೈಲಿನಲ್ಲಿ ಮಹಿಳೆಗೆ ಚಾಕು ಹಾಕಲು ಯತ್ನಿಸಿ ಸಿಕ್ಕಿಬಿದ್ದ ಕಿರಾತಕ ವಿಶ್ವ

ಅವನು ದಾವಣಗೆರೆ ರೈಲಿನಲ್ಲಿ ಮಹಿಳೆ ಮೇಲೆ ಚಾಕು ಹಾಕಿದಾನಲ್ಲಾ ಹಾಗಿದ್ರೆ ಅವಳಗೇನು ಸಂಬಂಧ?. ಯಾಕೆ ಚಾಕು ಹಾಕೋಕೆ ಹೋದ?. ವಿಶ್ವ ಮನಸ್ಥಿತಿ ಹಾಗಿದೆ ಹೀಗಾಗಿ ನಮ್ಮ ಅಕ್ಕ ಬಲಿಯಾಗಿದ್ದಾಳೆ ಎಂದು ಕಿಡಿಕಾರಿದಳು.

ಪ್ರಕರಣದ ವಿವರ: ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಿದೆ. ಅಂಜಲಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗಿರೀಶ್ ಅಲಿಯಾಸ್ ವಿಶ್ವ ಏಕಾಏಕಿ ಮನೆಗೆ ಎಮಟ್ರಿ ಕೊಟ್ಟಿದ್ದಾನೆ. ಅಲ್ಲದೆ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನು ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರ ಹತ್ಯೆಗೈದಿದ್ದಾನೆ.

ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

Share This Article