ಮೈಸೂರು: ಸ್ಯಾಂಡಲ್‍ವುಡ್ ದಿವಗಂತ ನಟ ಸಾಹಸಸಿಂಹ ವಿಷ್ಣುವರ್ಧನ್‍ರವರಿಗೆ ಇಂದು 71ನೇ ಜನುಮ ದಿನ. ಈ ವಿಶೇಷ ದಿನದಂದು ವಿಷ್ಣುವರ್ಧನ್‍ರವರು ನಮ್ಮ ಜೊತೆ ಇಲ್ಲದಿದ್ದರೂ, ಅವರ ಅಭಿಮಾನಿಗಳು ಬಹಳ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
Advertisement
ಈ ಮಧ್ಯೆ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದ ಸಾಹಸ ಸಿಂಹ ವಿಷ್ಣುವರ್ಧನ್ ಉದ್ಯಾನವನದಲ್ಲಿ ಅನಧಿಕೃತವಾಗಿ ಇಟ್ಟಿದ್ದ ವಿಷ್ಣು ಪ್ರತಿಮೆಯನ್ನು ಪೊಲೀಸರು ತೆರವು ಮಾಡಿದ್ದಾರೆ. ಇದನ್ನೂ ಓದಿ: ತಾತನ ಕಷ್ಟಕ್ಕೆ ಮರುಗಿ ಎತ್ತುಗಳಾದ ಮೊಮ್ಮಕಳು – ತಾತನಿಗೆ ನೆರವಾದ ಜ್ಯೋತಿಷಿ ಕಮಲಾಕರ್ ಭಟ್
Advertisement
Advertisement
ಪಾರ್ಕ್‍ನಲ್ಲಿ ರಾತ್ರೋ ರಾತ್ರಿ ಡಾ. ವಿಷ್ಣುವರ್ಧನ್ ಪ್ರತಿಮೆ ಇಡಲಾಗಿತ್ತು. ಪಾಲಿಕೆ ಉದ್ಯಾನವನದಲ್ಲಿ ಅನುಮತಿ ಪಡೆಯದೇ ಡಾ. ವಿಷ್ಣುವರ್ಧನ್ ಪ್ರತಿಮೆ ಇಟ್ಟ ಕಾರಣ ಅದನ್ನು ಪೊಲೀಸರು ತೆರವು ಮಾಡಿದ್ದು, ಇದಕ್ಕೆ ವಿಷ್ಣು ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸಲಿರುವ ಬೆಂಗಳೂರು ಮೆಟ್ರೋ
Advertisement