ಭಾರತ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅಭಿನೇತ್ರಿಯೇ ಸರೋಜಾ ದೇವಿ ಅವ್ರು.. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಅಭಿನಯ ಸರಸ್ವತಿಯನ್ನೇ ತನ್ನ ಕಲೆ ಅಡಗಿಸಿಟ್ಟುಕೊಂಡಿದ್ದ ಮಹಾನ್ ಕಲಾವಿದೆ ಇವರು.. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಅಭಿನಯಿಸಿ.. ಸೈ ಎನಿಸಿಕೊಂಡಿದ್ದಲ್ಲದೇ ಸಿನಿರಸಿಕರನ್ನ ರಂಜಿಸಿದ್ದಾರೆ. ನಟಿಯ ನಿಧನಕ್ಕೆ ಸಿನಿ ಕಲಾವಿದರು ಕಂಬನಿ ಮಿಡಿದ್ದಾರೆ. ಇಂದು ನಟ ವಿಶಾಲ್ ಕೂಡ ಸರೋಜಾದೇವಿ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದು, ಭಾವುಕ ನುಡಿಗಳನ್ನಾಡಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ…
ಸರೋಜಮ್ಮ ದಂತಕಥೆ, ಅವರ ಸ್ಥಾನ ತುಂಬಲೂ ಯಾರಿಂದಲೂ ಸಾಧ್ಯವಿಲ್ಲ: ನಟ ವಿಶಾಲ್ ಭಾವುಕ
