ತಮ್ಮೊಂದಿಗೆ ‘ಪಾಂಡಿಯ ನಾಡು’ ಚಿತ್ರದಲ್ಲಿ ನಟಿಸಿದ್ದ ನಟಿ ಲಕ್ಷ್ಮಿ ಮೆನನ್ (Lakshmi Menon) ಅವರನ್ನು ನಟ ವಿಶಾಲ್ (Vishal) ಮದುವೆಯಾಗಲಿದ್ದಾರೆ (Marriage) ಎನ್ನುವ ಸುದ್ದಿ ಹಲವು ದಿನಗಳಿಂದ ತಮಿಳು (Tamil) ಚಿತ್ರೋದ್ಯಮದಲ್ಲಿ ಹರಿದಾಡುತ್ತಿತ್ತು. ಈ ಹಿಂದೆ ವಿಶಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದೂ ಹೇಳಲಾಗಿತ್ತು.
ಪಾಂಡಿಯ ನಾಡು (Pandiya Nadu) ಸಿನಿಮಾ ಲಕ್ಷ್ಮಿ ಮತ್ತು ವಿಶಾಲ್ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದು ಕೊಟ್ಟಿತ್ತು. ಬಾಕ್ಸ್ ಆಫೀಸಿನಲ್ಲೂ ಸಖತ್ ಕಮಾಯಿ ಮಾಡಿತ್ತು. ಹೀಗಾಗಿ ಅಲ್ಲಿಂದಲೇ ಈ ಜೋಡಿ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿತ್ತು. ಈ ಎಲ್ಲ ವದಂತಿಗಳಿಗೆ ವಿಶಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ನಟಿ ಜಾಕ್ವೆಲಿನ್ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ಭಾವುಕ ಪತ್ರ ಬರೆದ ಆರೋಪಿ ಸುಕೇಶ್
ವಂದತಿಗಳು ಹರಡಿದಾಗ ನಾನು ಯಾವುದಕ್ಕೂ ಉತ್ತರಿಸುವುದಕ್ಕೆ ಹೋಗುವುದಿಲ್ಲ. ಆದರೆ ಮದುವೆ ವಿಚಾರದಲ್ಲಿ ನನಗೆ ಸುಮ್ಮನಿರಲು ಆಗುತ್ತಿಲ್ಲ. ಸುಖಾಸುಮ್ಮನೆ ಒಂದು ಹುಡುಗಿಯ ಹೆಸರನ್ನು ತಳುಕು ಹಾಕಲಾಗುತ್ತಿದೆ. ನಾನು ಮದುವೆ ಆಗುತ್ತಿಲ್ಲ. ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ಸುದ್ದಿ ಸುಳ್ಳು. ಅವರ ಹೆಸರನ್ನು ಹಾಳು ಮಾಡಬೇಡಿ ಎಂದು ವಿಶಾಲ್ ಬರೆದುಕೊಂಡಿದ್ದಾರೆ.
45ರ ವಯಸ್ಸಿನ ವಿಶಾಲ್ ಈವರೆಗೂ ಮದುವೆ ಆಗಿಲ್ಲ. ಈ ಹಿಂದೆ ಅವರಿಗೆ ನಿಶ್ಚಿತಾರ್ಥವಾಗಿತ್ತು. ಆದರೆ, ಆ ಮದುವೆ ನಡೆಯಲಿಲ್ಲ. ಅಲ್ಲಿಂದೀಚೆಗೆ ಅನೇಕ ಹುಡುಗಿಯರ ಜೊತೆ ವಿಶಾಲ್ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಯಾವುದಕ್ಕೂ ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.
Web Stories