ಚೆನ್ನೈ: ತಮಿಳು ನಟ ವಿಶಾಲ್ ಹಾಗೂ ತೆಲುಗಿನ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಅನಿಶಾ ಅಲ್ಲ ಮದುವೆ ಮುರಿದು ಬಿದ್ದಿದೆ ಎಂಬ ಸುದ್ದಿ ಸೌತ್ ಚಿತ್ರರಂಗದಲ್ಲಿ ಹರಿದಾಡುತ್ತಿದೆ.
ವಿಶಾಲ್ ಹಾಗೂ ಅನಿಶಾ ಪರಸ್ಪರ ಪ್ರೀತಿಸಿ ಮನೆಯವರ ಒಪ್ಪಿಗೆ ಮೆರಿಗೆ ಮಾರ್ಚ್ ತಿಂಗಳಿನಲ್ಲಿ ಹೈದರಾಬಾದ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಲ್ಲದೆ ಅಗಸ್ಟ್ ತಿಂಗಳಿನಲ್ಲಿ ಚೆನ್ನೈನ ನದಿಗರ್ ಸಂಗಮ್‍ನಲ್ಲಿ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಷ್ಟರಲ್ಲೇ ಇಬ್ಬರ ಮದುವೆ ಮುರಿದು ಬಿದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಹಿಂದೆ ವಿಶಾಲ್ ಹಾಗೂ ಅನಿಶಾ ಫೋಟೋ ಹಾಕುವುದರ ಮೂಲಕ ಪರಸ್ಪರ ಪ್ರೀತಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಆದರ ಈಗ ಅನಿಶಾ ನಟ ವಿಶಾಲ್ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಇವರ ಮದುವೆ ಕ್ಯಾನ್ಸಲ್ ಆಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಮೊದಲು ಅಂದರೆ ಜನವರಿ 16ರಂದು ವಿಶಾಲ್ ತಮ್ಮ ಟ್ವಿಟ್ಟರಿನಲ್ಲಿ, “ಹೌದು. ನಾನು ತುಂಬಾ ಖುಷಿಯಾಗಿದ್ದೇನೆ. ಈಕೆಯ ಹೆಸರು ಅನಿಶಾ ಅಲ್ಲ ಹಾಗೂ ಆಕೆ ನನಗೆ ಯೆಸ್ ಎಂದು ಹೇಳಿದ್ದಾರೆ. ಈಗ ಇದು ಖಚಿತವಾಗಿದೆ. ಇದು ನನ್ನ ಜೀವನದ ಅತ್ಯಂತ ದೊಡ್ಡ ಪರಿವರ್ತನೆ. ಶೀಘ್ರದಲ್ಲೇ ದಿನಾಂಕವನ್ನು ನಿಗದಿ ಪಡಿಸುತ್ತೇವೆ” ಎಂದು ಟ್ವೀಟ್ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದರು.
Yes.. happy. Too happy. Happiest. Her name s #AnishaAlla. And yes she said yes. And it’s confirmed. My next biggest transition in life.????????????????❤️❤️❤️???????????? will be announcing the date soon. God bless. pic.twitter.com/NNF7W66T2h
— Vishal (@VishalKOfficial) January 16, 2019
ಅನಿಶಾ ಕೂಡ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಶಾಲ್ ಜೊತೆಯಿರುವ ಫೋಟೋವನ್ನು ಹಾಕಿ ಅದಕ್ಕೆ, “ಜೀವನದಲ್ಲಿ ಈಗ ಒಂದು ಹೊಸ ವಿಷಯ ಶುರುವಾಗುತ್ತಿದೆ. ನೀವು ನನಗೆ ಎಲ್ಲವನ್ನು ನೀಡಿದ್ದಕ್ಕೆ ಧನ್ಯವಾದಗಳು. ನನ್ನ ಬೆಳವಣಿಗೆ, ನನ್ನ ಕಲಿಕೆ, ನನ್ನ ಸ್ಫೂರ್ತಿ, ನನ್ನ ಸತ್ಯ, ನನ್ನ ನೋವು, ನನ್ನ ಶಕ್ತಿ ಎಲ್ಲದರಲ್ಲೂ ಭಾಗಿಯಾಗಿದ್ದೀರಿ. ಹಾಗಾಗಿ ನಾನು ಈ ಸ್ಥಾನದಲ್ಲಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು.
ಸದ್ಯ ಮದುವೆ ಕ್ಯಾನ್ಸಲ್ ಆಗಿರುವ ಬಗ್ಗೆ ವಿಶಾಲ್ ಆಗಲಿ, ಅನಿಶಾ ಆಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.