ಹೈದರಾಬಾದ್: ವಿಶಾಖಪಟ್ಟಣಂ (Visakhapatnam) ಆಂಧ್ರಪ್ರದೇಶ (Andhrapradesh) ದ ಹೊಸ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Jagan Mohan Reddy) ಘೋಷಿಸಿದರು.
ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ಅಮರಾವತಿ ಬದಲು ವಿಶಾಖಪಟ್ಟಣಂ ರಾಜಧಾನಿಯಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಎರಡನೇ ಅಧಿಕೃತ ಭಾಷೆಯಾಗುತ್ತಾ ತುಳು? – ಅಧ್ಯಯನಕ್ಕೆ ಸಮಿತಿ ರಚನೆ
Advertisement
Advertisement
ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಕ್ಕೆ ನಾನು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ಮುಂಬರುವ ತಿಂಗಳುಗಳಲ್ಲಿ ನಾನೇ ವಿಶಾಖಪಟ್ಟಣಂಗೆ ಶಿಫ್ಟ್ ಆಗಲಿದ್ದೇನೆ. ನಾವು ಮಾರ್ಚ್ 3 ಮತ್ತು 4 ರಂದು ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ ಎಂದರು.
Advertisement
ನಾನು ನಿಮ್ಮೆಲ್ಲರನ್ನು ವಿಶಾಖಪಟ್ಟಣಂ ಬರಲು ಹೇಳುವುದು ಮಾತ್ರವಲ್ಲದೆ ವಿದೇಶದಲ್ಲಿರುವ ನಿಮ್ಮ ಸಹೋದ್ಯೋಗಿಗಳಿಗೆ ನಮ್ಮನ್ನು ಭೇಟಿ ವೈಯಕ್ತಿಕವಾಗಿ ಆಹ್ವಾನಿಸುತ್ತೇನೆ. ನಮ್ಮ ಆಂಧ್ರಪ್ರದೇಶದಲ್ಲಿ ವ್ಯಾಪಾರ ಮಾಡುವುದು ಎಷ್ಟು ಸುಲಭ ಎಂದು ನೀವೇ ನೋಡಿ ಎಂದು ಅವರು ಹೇಳಿದರು.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k