ಬೆಂಗಳೂರು: ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಪೂರ್ವ ಕರಾವಳಿ ರೈಲ್ವೆಯು ರೈಲು ಸಂಖ್ಯೆ 08581/08582 ವಿಶಾಖಪಟ್ಟಣಂ–ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ವಿಶಾಖಪಟ್ಟಣಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಹಾಗೂ ರೈಲು ಸಂಖ್ಯೆ 02811/02812 ಭುವನೇಶ್ವರ–ಯಶವಂತಪುರ–ಭುವನೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲು ಸೂಚಿಸಿದೆ.
ಪ್ರತಿ ಭಾನುವಾರ ಚಲಿಸುವ ರೈಲು ಸಂಖ್ಯೆ 08581 ವಿಶಾಖಪಟ್ಟಣಂ–ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಡಿ.7 ರಿಂದ ಡಿ.28 ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ, ಪ್ರತಿ ಸೋಮವಾರ ಕಾರ್ಯನಿರ್ವಹಿಸುವ ರೈಲು ಸಂಖ್ಯೆ 08582 ಎಸ್ಎಂವಿಟಿ ಬೆಂಗಳೂರು–ವಿಶಾಖಪಟ್ಟಣಂ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಡಿ.8 ರಿಂದ ಡಿ.29 ರವರೆಗೆ ವಿಸ್ತರಣೆಗೊಂಡಿದೆ.
ಪ್ರತಿ ಶನಿವಾರ ಸಂಚರಿಸುವ ರೈಲು ಸಂಖ್ಯೆ 02811 ಭುವನೇಶ್ವರ–ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಡಿ.6 ರಿಂದ ಡಿ.27 ರವರೆಗೆ ತನ್ನ ಸೇವೆಯನ್ನು ಮುಂದುವರೆಸಲಿದೆ. ಅಂತೆಯೇ, ಸೋಮವಾರದಂದು ಚಲಿಸುವ ರೈಲು ಸಂಖ್ಯೆ 02812 ಯಶವಂತಪುರ–ಭುವನೇಶ್ವರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಡಿ.8 ರಿಂದ ಡಿ.29 ರವರೆಗೆ ವಿಸ್ತರಣೆಗೊಂಡಿದೆ.
ವಿಸ್ತರಿತ ಅವಧಿಯಲ್ಲಿ, ಪ್ರತಿ ರೈಲು ಪ್ರತಿ ದಿಕ್ಕಿನಲ್ಲಿ ನಾಲ್ಕು ಹೆಚ್ಚುವರಿ ಟ್ರಿಪ್‌ಗಳನ್ನು ನಿರ್ವಹಿಸಲಿದೆ. ಈ ವಿಶೇಷ ಸೇವೆಗಳು ತಮ್ಮ ಸಮಯ, ನಿಲುಗಡೆಗಳು ಮತ್ತು ಸಂಯೋಜನೆಯೊಂದಿಗೆ ಮುಂದುವರೆಯಲಿವೆ.
ಹೈದರಾಬಾದ್-ಬೆಳಗಾವಿ-ಹೈದರಾಬಾದ್ ವಿಶೇಷ ರೈಲು ಸೇವೆಗಳ ವಿಸ್ತರಣೆ
ಡಿಸೆಂಬರ್ ತಿಂಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ರೈಲು ಸಂಖ್ಯೆ 07043/07044 ಹೈದರಾಬಾದ್-ಬೆಳಗಾವಿ-ಹೈದರಾಬಾದ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಗಳನ್ನು ವಿಸ್ತರಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.
ಪ್ರತಿ ಗುರುವಾರ ಚಲಿಸುವ ರೈಲು ಸಂಖ್ಯೆ 07043 ಹೈದರಾಬಾದ್-ಬೆಳಗಾವಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಡಿ.4 ರಿಂದ ಡಿ.25 ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ, ಪ್ರತಿ ಶುಕ್ರವಾರ ಕಾರ್ಯನಿರ್ವಹಿಸುವ ರೈಲು ಸಂಖ್ಯೆ 07044 ಬೆಳಗಾವಿ-ಹೈದರಾಬಾದ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಡಿ.5 ರಿಂದ ಡಿ.26 ರವರೆಗೆ ವಿಸ್ತರಿಸಲಾಗಿದೆ.
ಈ ವಿಸ್ತೃತ ಅವಧಿಯಲ್ಲಿ ಪ್ರತಿ ರೈಲು ನಾಲ್ಕು ಟ್ರಿಪ್‌ಗಳನ್ನ ನಿರ್ವಹಿಸುತ್ತದೆ. ಈ ಸೇವೆಗಳು ಅಸ್ತಿತ್ವದಲ್ಲಿರುವ ಸೇವೆಯ ದಿನಗಳು, ಸಮಯ, ನಿಲುಗಡೆಗಳು ಮತ್ತು ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ.

