– ಮಹಿಳಾ ಸ್ಟೇಟ್ ಹೋಂನಿಂದ ಪರಾರಿ
ಬೆಂಗಳೂರು: ಕಾಂಪೌಂಡ್ ಹಾರಿ ಐವರು ವಿದೇಶಿ ಮಹಿಳೆಯರು ಸ್ಟೇಟ್ ಹೋಂ ನಿಂದ ಎಸ್ಕೇಪ್ ಆಗಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Advertisement
ವಿಸಾ, ಪಾಸ್ ಪೋರ್ಟ್, ಮುಗಿದಿರುವ ಮತ್ತು ಕೆಲ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಹದಿಮೂರು ವಿದೇಶಿ ಮಹಿಳಾ ಪ್ರಜೆಗಳನ್ನು ಬಂಧಿಸಿ, ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದರು. ಆದರೆ ತಡರಾತ್ರಿ 2.30ರ ವೇಳೆಗೆ ಸಿಬ್ಬಂದಿಯ ಬಳಿ ನೀರು ಕೇಳಿದ್ದು, ಸಿಬ್ಬಂದಿ ನೀರು ಕೊಟ್ಟು ಹೊರಗಡೆ ಬಂದ ತಕ್ಷಣ 13 ಮಹಿಳೆಯರು 6 ಅಡಿ ಕಾಂಪೌಂಡ್ ಹಾರಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಈ ವೇಳೆ ಕಣ್ತಪ್ಪಿಸಿ ಐವರು ವಿದೇಶಿ ಮಹಿಳೆಯರು ಕಾಂಪೌಡ್ ಹಾರಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಆರೋಗ್ಯ ಸ್ಥಿತಿ ಗಂಭೀರ- ದಂಪತಿ ಆತ್ಮಹತ್ಯೆ
Advertisement
Advertisement
ಕಬ್ಬಿಣದ ರ್ಯಾಕ್ ಗಳ ಮೂಲಕ ಒಬ್ಬೊಬ್ಬರೇ ಎಸ್ಕೇಪ್ ಆಗಲು ಶುರುಮಾಡಿದ್ದಾರೆ. ಈ ವೇಳೆ ಐವರು ಎಸ್ಕೇಪ್ ಆಗಿದ್ದು, ಒರ್ವ ಮಹಿಳೆ ತಪ್ಪಿಸಿಕೊಳ್ಳುವಾಗ ಗೋಡೆ ಮೇಲಿಂದ ಬಿದ್ದು ಕಾಲು ಮುರಿದುಕೊಂಡಿದ್ದಾಳೆ. ಮಹಿಳೆ ಕೆಳಗೆ ಬಿದ್ದ ಶಬ್ದ ಕೇಳಿದ ಸಿಬ್ಬಂದಿ, ತಕ್ಷಣ ಸ್ಥಳಕ್ಕೆ ಬಂದು ಇತರೆ ಎಂಟು ಜನರನ್ನು ವಶಕ್ಕೆ ಪಡೆದಿದ್ದಾರೆ. ಕಾಲು ಮುರಿದುಕೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಎಸ್ಕೇಪ್ ಆಗಿರುವ ಐವರು ವಿದೇಶಿ ಮಹಿಳೆಯರ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಗೆ ಇಳಿದ ಪೊಲೀಸರು, ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಎಸ್ಕೇಪ್ ಆದ ಮಹಿಳೆಯರ ಬಂಧನಕ್ಕಾಗಿ ಬಲೆಬೀಸಿದ್ದಾರೆ.