ಮುಂಬೈ: ವಿರೇಂದ್ರ ಸೆಹ್ವಾಗ್, ಬ್ರೇಟ್ ಲೀ, ವಿವಿಎಸ್ ಲಕ್ಷ್ಮಣ್ ಧೋನಿಯ ಹೆಲಿಕಾಪ್ಟರ್ ಶಾಟ್ ಹೊಡೆಯುವ ಪ್ರಯತ್ನದಲ್ಲಿ ವಿಫಲರಾಗಿರುವ ವಿಡಿಯೋ ಈಗ ವೈರಲ್ ಆಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ಧೋನಿಯ ತವರು ನೆಲ ರಾಂಚಿಯಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರರಾಗಿ ಭಾಗವಹಿಸಿದ್ದ ಟೀಂ ಇಂಡಿಯಾದ ಮಾಜಿ ಆಟಗಾರರಾದ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹಾಗೂ ಆಸ್ಟ್ರೇಲಿಯಾ ಬೌಲರ್ ಬ್ರೇಟ್ ಲೀ ಹೆಲಿಕಾಪ್ಟರ್ ಶಾಟ್ ಹೊಡೆಯುವ ಪ್ರಯತ್ನ ನಡೆಸಿದ್ದಾರೆ.
Advertisement
ಮೂವರು ಆಟಗಾರರು ಪ್ರಯತ್ನ ಪಟ್ಟರು ಬಾಲ್ ಬೌಂಡರಿ ಗೆರೆ ದಾಟಲಿಲ್ಲ. ಸ್ಟಾರ್ ವಾಹಿನಿ ಈ ಮೂರು ಮಂದಿ ಹೆಲಿಕಾಪ್ಟರ್ ಶಾಟ್ ಹೊಡೆಯುತ್ತಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದು ವೈರಲ್ ಆಗಿದೆ.
Advertisement
ಕ್ಯಾಪ್ಟನ್ ಕೂಲ್ ಧೋನಿ ಹೆಲಿಕಾಪ್ಟರ್ ಶಾಟ್ ಹಿಂದೆ ನೋವಿನ ಕಥೆಯಿದೆ. ಧೋನಿ ಅವರಿಗೆ ಈ ರೀತಿಯ ಸಿಕ್ಸರ್ ಹೊಡೆಯುವುದನ್ನು ಕಲಿಸಿಕೊಟ್ಟವರು ಸ್ನೇಹಿತ ಮಾಜಿ ರಣಜಿ ಆಟಗಾರ ಸಂತೋಷ್ ಲಾಲ್. ಧೋನಿ ಮತ್ತು ಸಂತೋಷ್ ಲಾಲ್ ಈ ಹಿಂದೆ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಲಾಲ್ ಉತ್ತಮ ಬ್ಯಾಟ್ಸ್ ಮನ್ ಆಗಿದ್ದರು. ಇಬ್ಬರು ಒಟ್ಟಿಗೆ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಧೋನಿಗೆ ಹೆಲಿಕಾಪ್ಟರ್ ಶಾಟ್ ಹೊಡೆಯುವುದನ್ನು ಹೇಳಿಕೊಟ್ಟಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಸಂತೋಷ್ 2013ರ ಜೂನ್‍ನಲ್ಲಿ ಮೃತಪಟ್ಟಿದ್ದಾರೆ.
Advertisement
When in Ranchi, smack it like Dhoni! Watch the experts try to pull off helicopter shots, and catch #NerolacCricketLive NOW on Star Sports! pic.twitter.com/BwO8zOGYvZ
— Star Sports (@StarSportsIndia) October 7, 2017
Advertisement
https://youtu.be/smMJbz4L6Ho
https://youtu.be/UtuHRJEGo8I
https://youtu.be/4PN-Cgkl9aA
https://youtu.be/Qxw6IKyFr94