ನವದೆಹಲಿ: `ಇಂಡಿಯಾ’ ಬದಲು ದೇಶದ ಹೆಸರನ್ನು `ರಿಪಬ್ಲಿಕ್ ಆಫ್ ಭಾರತ್’ (Republic Of Bharat) ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ ಬೆನ್ನಲ್ಲೇ ಈಗ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಅವರು ಬಿಸಿಸಿಐಗೆ ಆಗ್ರಹವೊಂದನ್ನು ಮಾಡಿದ್ದಾರೆ.
Team India nahin #TeamBharat.
This World Cup as we cheer for Kohli , Rohit , Bumrah, Jaddu , may we have Bharat in our hearts and the players wear jersey which has “Bharat” @JayShah . https://t.co/LWQjjTB98Z
— Virender Sehwag (@virendersehwag) September 5, 2023
Advertisement
ಈ ಸಂಬಂಧ ಟ್ವೀಟ್ ಮಾಡಿರುವ ಸೆಹ್ವಾಗ್, ಟೀಂ ಇಂಡಿಯಾದ (Team India) ಜೆರ್ಸಿಯಲ್ಲಿ ಹೆಸರು ಬದಲಾವಣೆ ಮಾಡಿ. ಟೀಂ ಇಂಡಿಯಾ ಬದಲಿಗೆ ಟೀಂ ಭಾರತ್ (Team Bharat) ಅಂತ ಜೆರ್ಸಿ ಬದಲಿಸುವಂತೆ ಬಿಸಿಸಿಐಗೆ (BCCI) ಮಾಜಿ ಕ್ರಿಕೆಟಿಗ ಒತ್ತಾಯಿಸಿದ್ದಾರೆ. ಅಲ್ಲದೆ ಈ ವಿಶ್ವಕಪ್‍ನಲ್ಲಿ ನಾವು ಕೊಹ್ಲಿ, ರೋಹಿತ್, ಬುಮ್ರಾ, ಜಡೇಜಾ ಅವರನ್ನು ಹುರಿದುಂಬಿಸುತ್ತೇವೆ. ನಮ್ಮ ಹೃದಯದಲ್ಲಿ ಭಾರತೀಯರು ಎಂಬುದೇ ಇರಲಿ ಮತ್ತು ಆಟಗಾರರು `ಭಾರತ್’ ಇರುವ ಜೆರ್ಸಿಯನ್ನು ಧರಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬದಲಾಗುತ್ತಾ ದೇಶದ ಹೆಸರು – ‘ಇಂಡಿಯಾ’ ಬದಲಿಗೆ ‘ರಿಪಬ್ಲಿಕ್ ಆಫ್ ಭಾರತ್’ ಅಂತ ಮರುನಾಮಕರಣ?
Advertisement
Ji haan https://t.co/R4Tbi9AQgA
— Virender Sehwag (@virendersehwag) September 5, 2023
Advertisement
ವೀರೇಂದ್ರ ಸೆಹ್ವಾಗ್ ಮೊದಲೇ ಭಾರತ್ ಹೆಸರನ್ನು ಟ್ವೀಟ್ ಮಾಡಿದ್ದರು. ಭಾರತ- ಪಾಕಿಸ್ತಾನ (India Pakistan) ನಡುವಿನ ಏಷ್ಯಕಪ್ (Asia Cup) ಕ್ರಿಕೆಟ್ ಪಂದ್ಯದ ವೇಳೆ #BHAvsPAK ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದರು.
Advertisement
ಇತ್ತ Board of Control for Cricket in India (BCCI) ಬದಲು Board of Control for Cricket in BHARAT (BCCB) ಎಂಬುದಾಗಿ ಬದಲಾಯಿಸಬೇಕು ಎಂಬ ಕೂಗು ಕೂಡ ಎದ್ದಿದೆ. ಒಟ್ಟಿನಲ್ಲಿ `ಇಂಡಿಯಾ’ ಬದಲು ದೇಶದ ಹೆಸರನ್ನು `ರಿಪಬ್ಲಿಕ್ ಆಫ್ ಭಾರತ್’ ಎಂದು ಕರೆಯಬೇಕು ಎಂಬುದಾಗಿ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಲಹೆ ನೀಡಿದ್ದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಣಯಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಜಿ20 ಶೃಂಗಸಭೆಗೆ ರಾಷ್ಟ್ರಪತಿಗಳು ಗಣ್ಯರಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ `ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ `ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಿದ ನಂತರ ಈ ಚರ್ಚೆ ಹುಟ್ಟಿಕೊಂಡಿದೆ.
Web Stories