ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕನ್ನಡಿಗ ಕೆಎಲ್ ರಾಹುಲ್ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿಯುತ್ತಿದಂತೆ ಸೆಹ್ವಾಗ್ ತಮ್ಮ ಆತ್ಮೀಯ ಗೆಳೆಯ ದ್ರಾವಿಡ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
ದ್ರಾವಿಡ್ ನಿವೃತ್ತಿಯ ಬಳಿಕ ಮೊದಲ ಬಾರಿಗೆ ಟೆಸ್ಟ್ ಪಂದ್ಯದ ನಂ.3 ರ ಬ್ಯಾಟಿಂಗ್ ಕ್ರಮದಲ್ಲಿ ರಾಹುಲ್ ಹೆಸರನ್ನು ಕಾಣುತ್ತಿರುವುದಾಗಿ ಹೇಳಿದ್ದಾರೆ. ಅಫ್ಘಾನ್ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ ಧವನ್ ಸ್ಫೋಟಕ ಶತಕ ಸಿಡಿಸಿ ಔಟಾಗುತ್ತಿದಂತೆ ರಾಹುಲ್ ಬ್ಯಾಟಿಂಗ್ ನಡೆಸಿ ಅರ್ಧಶತಕ (54) ಪೂರೈಸಿದರು.
Advertisement
Arson baad ek Rahul number teen par. #INDvAFG
— Virender Sehwag (@virendersehwag) June 14, 2018
Advertisement
ಪಂದ್ಯದಲ್ಲಿ ಸೆಹ್ವಾಗ್ ದಾಖಲೆ ಮುರಿದ ಧವನ್ ಮೊದಲ ದಿನ ಭೋಜನ ವಿರಾಮಕ್ಕೂ ಮುನ್ನ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಸೆಹ್ವಾಗ್ 2006 ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ 99 ರನ್, 1967 ರಲ್ಲಿ ಫಾರುಖ್ ಎಂಜಿನಿಯರ್ 94 ರನ್ ಗಳಿಸಿದ್ದರು. ಅಲ್ಲದೇ ಪಂದ್ಯದ ವಿರಾಮದ ವೇಳೆ ಶತಕ ಸಿಡಿಸಿದ 6ನೇ ಆಟಗಾರ ಎಂಬ ವಿಶೇಷ ಸಾಧನೆ ಮಾಡಿದರು. ಈ ಹಿಂದೆ ಆಸೀಸ್ ನ ವಿಕ್ಟರ್ ಟ್ರಂಪರ್, ಚಾರ್ಲ್ಸ್ ಮ್ಯಾಕಾರ್ಟ್‍ನಿ, ಡಾನ್ ಬ್ರಾಡ್ ಮನ್, ಡೇವಿಡ್ ವಾರ್ನರ್ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಮಜೀದ್ ಖಾನ್ ಈ ಸಾಧನೆ ಮಾಡಿದ್ದರು.