ಮುಂಬೈ: ಟೀಂ ಇಂಡಿಯಾ ಡ್ಯಾಶಿಂಗ್ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಫುಟ್‍ವರ್ಕ್ ಕುರಿತು ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಕ್ರಿಸ್‍ನಲ್ಲಿ ಪಾದವನ್ನು ಕದಲಿಸದೆ ಕ್ರೀಡಾಂಗಣದ ಮೂಲೆ ಮೂಲೆಗೂ ಯಾವ ರೀತಿ ಶಾಟ್ ಆಡುತ್ತಿದ್ದರು ಎಂಬ ಅಭಿಮಾನಿಗಳ ಚರ್ಚೆಗೆ ಸ್ವತಃ ಸೆಹ್ವಾಗ್ ಉತ್ತರಿಸಿದ್ದಾರೆ.
ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಸೆಹ್ವಾಗ್ ಟೆಸ್ಟ್ ಪಂದ್ಯದಲ್ಲಿ ಮೊದಲ ತ್ರಿಶತಕ ಸಿಡಿಸಿ ದಾಖಲೆ ಬರೆದಿದ್ದರು. ಕ್ರಿಕೆಟ್ ಕೆರಿಯರ್ ಆರಂಭದಲ್ಲಿ ಎಷ್ಟು ಅಕ್ರಮಣಕಾರಿಯಾಗಿ ಆಡುತ್ತಿದ್ದರೋ ನಿವೃತ್ತಿ ಸಮಯದ ವೇಳೆಗೂ ಅದೇ ಪವರ್‍ಫುಲ್ ಹೊಡೆತಗಳು ಸೆಹ್ವಾಗ್ ಬ್ಯಾಟಿಂಗ್‍ನಲ್ಲಿ ಕಾಣಸಿಗುತ್ತಿತ್ತು.
Advertisement
So here is where i took my batting inspiration from 🙂
Pair hilana mushkil hi nahi , namumkin hai . #Angad ji Rocks pic.twitter.com/iUBrDyRQUF
— Virender Sehwag (@virendersehwag) April 12, 2020
Advertisement
ವೃತ್ತಿ ಜೀವನದ ಸಂದರ್ಭದಲ್ಲಿ ತಮ್ಮ ಫುಟ್‍ವರ್ಕ್ ಕುರಿತು ಎಂದು ಮಾತನಾಡದ ಸೆಹ್ವಾಗ್, ಸದ್ಯ ಟ್ವೀಟ್ ಮಾಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ರಾಮಾಯಣದ ‘ಅಂಗದ’ ತಮ್ಮ ಬ್ಯಾಟಿಂಗ್ ಸ್ಫೂರ್ತಿ ಎಂದು ಸೆಹ್ವಾಗ್ ತಿಳಿಸಿದ್ದಾರೆ. ಅಂದಹಾಗೇ ರಾಮಾಯಣದಲ್ಲಿ ಸೀತಾದೇವಿಯನ್ನು ರಾವಣ ಅಪಹರಿಸಿದ ಬಳಿಕ ಶ್ರೀರಾಮ ಯುದ್ಧ ಘೋಷಣೆ ಮಾಡುವ ಮುನ್ನ ಲಂಕೆಗೆ ಅಂಗದ ಯುದ್ಧದ ಸಂಧಿಗೆ ಕಳುಹಿಸಲಾಗಿತ್ತು. ಈ ವೇಳೆ ಅಂಗದ ಹಾಗೂ ರಾವಣನ ನಡುವೆ ಸಭೆಯಲ್ಲಿ ಮಾತು ಮಾತು ಬೆಳೆದು ಸವಾಲು ಎದುರಾಗಿತ್ತು. ಸವಾಲಿನ ಭಾಗವಾಗಿ ತನ್ನ ಕಾಲನ್ನು ಮುಂದಿಟ್ಟು ಅಂಗದ ನೆಲದ ಮೇಲೆ ತನ್ನ ಪಾದವನ್ನು ಯಾರಾದರೂ ಕದಲುವಂತೆ ಮಾಡಿದರೆ ಶ್ರೀರಾಮ ಸೋತಂತೆ ಎಂದು ಸವಾಲು ಎಸೆಯಲಾಗಿತ್ತು.
Advertisement
Advertisement
ಅಂಗದನ ಸವಾಲು ಸ್ವೀಕರಿಸಿದ ಸಭೆಯಲ್ಲಿದ್ದವರು ಅಂಗದನ ಪದಾವನ್ನು ಕದಲಿಸಲು ವಿಶ್ವ ಪ್ರಯತ್ನವನ್ನು ಮಾಡಿದ್ದರು. ಆದರೆ ಈ ಸವಾಲವನ್ನು ಗೆಲ್ಲಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಸದ್ಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿಯನ್ನು ಮರು ಪ್ರಸಾರ ಮಾಡಲಾಗುತ್ತಿದೆ. ಧಾರಾವಾಹಿಯ ಅಂಗದ ಸವಾಲಿನ ಸನ್ನಿವೇಶದ ಫೋಟೋವನ್ನು ಟ್ವೀಟ್ ಮಾಡಿ ತಮ್ಮ ಫುಟ್‍ವರ್ಕ್ ಕುರಿತು ಬರೆದುಕೊಂಡಿದ್ದಾರೆ.