ನವದೆಹಲಿ: ಲಕ್ಷದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದನ್ನು ಮಾಲ್ಡೀವ್ಸ್ ವ್ಯಂಗ್ಯವಾಡಿದ್ದು, ಈ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭವಾಗಿದೆ. ಈ ಬೆನ್ನಲ್ಲೇ ಕ್ರಿಕೆಟಿಗರು ಸೇರಿ ಹಲವರು ಈ ಕ್ಯಾಂಪೇನ್‍ನಲ್ಲಿ ಪಾಲ್ಗೊಂಡು ಮೋದಿ ಬೆಂಬಲಕ್ಕೆ ನಿಂತಿದ್ದಾರೆ.
Whether it be the beautiful beaches of Udupi , Paradise Beach in Pondi, Neil and Havelock in Andaman, and many other beautiful beaches throughout our country, there are so many unexplored places in Bharat which have so much potential with some infrastructure support. Bharat is… pic.twitter.com/w8EheuIEUD
— Virender Sehwag (@virendersehwag) January 7, 2024
Advertisement
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಅವರು ಭಾರತದ ಸುಂದರ ಬೀಚ್‌ಗಳ ಫೋಟೋಗಳನ್ನು (Beach Photo) ಶೇರ್ ಮಾಡಿದ್ದಾರೆ. ಇದರಲ್ಲಿ ಉಡುಪಿ ಜಿಲ್ಲೆಯ ಮರವಂತೆ ಬೀಚ್ ನ ಫೋಟೋಗಳು ಕೂಡ ಇದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ: #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್ ಫ್ಲೈಟ್ ಬುಕ್ಕಿಂಗ್ ರದ್ದು
Advertisement
Advertisement
ಸೆಹ್ವಾಗ್ ಹೇಳಿದ್ದೇನು..?: ನಮ್ಮಲ್ಲಿ ಮಾಲ್ಡೀವ್ಸ್‌ಗಿಂತ ಸುಂದರ ಬೀಚ್‍ಗಳಿವೆ. ಉಡುಪಿ, ಪುದುಚ್ಚೆರಿ, ಅಂಡಮಾನ್-ನಿಕೋಬಾರ್ ನ ದ್ವೀಪಗಳ ಜೊತೆಗೆ ಅದೆಷ್ಟೋ ಸುಂದರ ತಾಣಗಳಿವೆ. ಮೂಲಭೂತ ಸೌಕರ್ಯ ಕಲ್ಪಿಸಿದಲ್ಲಿ ಇವುಗಳು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸಲಿವೆ. ಆಪತ್ತಿನಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಸಮಯ ಬಂದಿದೆ. ನಮ್ಮ ಪ್ರಧಾನಿ ಬಗ್ಗೆ ಅನುಚಿತ ಹೇಳಿಕೆ ಕೊಟ್ಟ ಮಾಲ್ಡೀವ್ಸ್ ಮಂತ್ರಿಗಳಿಗೆ ಈ ರೀತಿಯಾಗಿ ತಿರುಗೇಟು ಕೊಡೋಣ ಎಂದು ಕರೆ ನೀಡಿದ್ದಾರೆ. ಇರ್ಫಾನ್ ಖಾನ್, ಸುರೇಶ್ ರೈನಾ ಸೇರಿ ಹಲವರು ಎಕ್ಸ್ ಮಾಡಿದ್ದಾರೆ.
Advertisement
Yes, Udupi is truly incredible. Pristine Beaches, Temple and amazing food.
— Virender Sehwag (@virendersehwag) January 7, 2024
ಸೆಹ್ವಾಗ್ ಅವರ ಈ ಪೋಸ್ಟ್‌ಗೆ ಎಕ್ಸ್ ಬಳಕೆದಾರರೊಬ್ಬರು ಉಡುಪಿ ಕುಂದಾಪುರಕ್ಕೆ ಯಾವತ್ತಾದರೂ ಭೇಟಿ ನೀಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೆಹ್ವಾಗ್ ಹೌದು, ಉಡುಪಿ ನಿಜಕ್ಕೂ ಅದ್ಬುತ. ಪ್ರಾಚೀನ ಕಡಲತೀರಗಳು, ದೇವಾಲಯ ಮತ್ತು ಅದ್ಭುತ ಆಹಾರಗಳಿವೆ ಎಂದು ಕರಾವಳಿ ಜಿಲ್ಲೆಯನ್ನು ಹೊಗಳಿದ್ದಾರೆ.