ನವದೆಹಲಿ: ಭಾರತದ (Team India) ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಮತ್ತು ಪತ್ನಿ ಆರತಿ ಅಹ್ಲಾವತ್ (Aarti Ahlawat) ಅವರ 20 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ.
ಸೆಹ್ವಾಗ್ ಮತ್ತು ಆರತಿ ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದು, ಶೀಘ್ರವೇ ವಿಚ್ಛೇದನ (Divorce) ನೀಡಲಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
2004 ರಲ್ಲಿ ಮದುವೆಯಾದ ಸೆಹ್ವಾಗ್ ಮತ್ತು ಆರತಿಗೆ ಇಬ್ಬರು ಮಕ್ಕಳಿದ್ದಾರೆ – ಆರ್ಯವೀರ್ 2007 ರಲ್ಲಿ ಜನಿಸಿದರೆ ವೇದಾಂತ್ 2010 ರಲ್ಲಿ ಹುಟ್ಟಿದ್ದ. ದಂಪತಿ ಹಲವಾರು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
Advertisement
ಸೆಹ್ವಾಗ್ ಅವರ ಇತ್ತೀಚಿನ ದೀಪಾವಳಿ ಆಚರಣೆಯ ಫೋಟೋ ಅಪ್ಲೋಡ್ ಮಾಡಿದ್ದರು. ಇದರಲ್ಲಿ ತಾಯಿ, ಮಕ್ಕಳು ಇದ್ದರೆ ಪತ್ನಿಯ ಫೋಟೋ ಇರಲಿಲ್ಲ.
Advertisement
ಕೆಲವು ವಾರಗಳ ಹಿಂದೆ ಸೆಹ್ವಾಗ್ ಕೇರಳದ ಪಾಲಕ್ಕಾಡ್‌ನಲ್ಲಿರುವ ವಿಶ್ವ ನಾಗಯಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ವೇಳೆಯೂ ಪತ್ನಿ ಆರತಿ ಕಾಣಿಸಿಕೊಂಡಿರಲಿಲ್ಲ. ಇಲ್ಲಿಯವರೆಗೆ ಇಬ್ಬರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.
ದೆಹಲಿ ಮೂಲದ ಆರತಿ ಅಹ್ಲಾವತ್ ಲೇಡಿ ಇರ್ವಿನ್ ಸೆಕೆಂಡರಿ ಶಾಲೆ ಮತ್ತು ಭಾರತೀಯ ವಿದ್ಯಾ ಭವನದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ದೆಹಲಿ ವಿಶ್ವವಿದ್ಯಾಲಯದ ಮೈತ್ರೇಯಿ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ ಪಡೆದರು.
ಸೆಹ್ವಾಗ್ ಮತ್ತು ಆರತಿ ಪ್ರೀತಿಸಿ ಮದುವೆಯಾಗಿದ್ದರು. 2000 ನೇ ಇಸ್ವಿಯಲ್ಲಿ ಆರಂಭಗೊಂಡ ಪ್ರೀತಿಗೆ 2004 ರಲ್ಲಿ ವಿವಾಹದ ಮುದ್ರೆ ಒತ್ತಿದ್ದರು. ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಇಬ್ಬರು ವಿವಾಹವಾಗಿದ್ದರು. ಇದನ್ನೂ ಓದಿ: ಸದ್ದಿಲ್ಲದೇ ಸಪ್ತಪದಿ ತುಳಿದ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ
ಸೆಹ್ವಾಗ್ 2015 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೇಳಿದ ನಂತರ ರಾಷ್ಟ್ರೀಯ ಡೋಪಿಂಗ್ ವಿರೋಧಿ ಏಜೆನ್ಸಿಯ ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುವುದರ ಜೊತೆ ವಾಹಿನಿಗಳಲ್ಲಿ ಕ್ರಿಕೆಟ್ ನಿರೂಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ.