ರಶ್ಮಿಕಾ ಮಂದಣ್ಣಗೆ ಟಾಂಗ್: ಸಾಯಿ‌ ಪಲ್ಲವಿಗೆ ನ್ಯಾಶನಲ್ ಕ್ರಶ್ ಎಂದ ಫ್ಯಾನ್ಸ್

Public TV
1 Min Read
sai pallavi

ಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತೆ ಸುದ್ದಿಯಲ್ಲಿದ್ದಾರೆ. ವಿರಾಟ ಪರ್ವಂ ಪಾತ್ರಕ್ಕೆ ಎರಡು ದಿನ ಉಪವಾಸವಿದ್ದು, ಕ್ಯಾಮೆರಾ ಮುಂದೆ ನಟಿಸಿದ್ದರು, ಇದೀಗ ಈ ಸುದ್ದಿ ತಿಳಿದ ಫ್ಯಾನ್ಸ್ ಸಾಯಿ ಪಲ್ಲವಿ ಕೆಲಸದ ಪರಿಗೆ ಭೇಷ್ ಎಂದಿದ್ದಾರೆ. ನೀವೇ ನಿಜವಾದ ನ್ಯಾಶನಲ್ ಕ್ರಶ್ ಎಂದು ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.

sai pallavi 3

ಸಾಯಿ ಪಲ್ಲವಿ ದಕ್ಷಿಣ ಭಾರತದ ಪ್ರತಿಭಾವಂತ ನಟಿ, ಆ ಪಾತ್ರವೇ ತಾವಾಗಿ ನಟಿಸೋ ಮಹಾನ್ ಕಲಾವಿದೆ. ಈಕೆಯ ಅಮೋಘ ನಟನೆ, ಡ್ಯಾನ್ಸ್ ನೋಡಿನೇ ಅಪಾರ ಅಭಿಮಾನಿಗಳು ಸಾಯಿ ಪಲ್ಲವಿಯನ್ನ ಇಷ್ಟಪಡುತ್ತಾರೆ. ಅವರ ಸಿನಿಮಾಗಾಗಿ ಕಾಯುತ್ತಾರೆ. ಸದ್ಯ `ವಿರಾಟ್ ಪರ್ವಂ’ ಚಿತ್ರದಲ್ಲಿ ನಕ್ಸಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರಕ್ಕಾಗಿ ಹಗಲು ರಾತ್ರಿ ಊಟ ಮಾಡದೇ 2 ದಿನಗಳ ಕಾಲ ಉಪವಾಸವಿದ್ದು ನಟಿಸಿರೋದು ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.

`ವಿರಾಟ್ ಪರ್ವಂ’ ಚಿತ್ರದಲ್ಲಿ ರಾಣಾಗೆ ನಾಯಕಿಯಾಗಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್ 17ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ಬೆನ್ನಲ್ಲೇ ಸಾಯಿ ಪಲ್ಲವಿ ಕುರಿತು ಅಚ್ಚರಿಯ ವಿಚಾರವೊಂದು ಹೊರಬಿದ್ದಿದೆ. ಈ ಚಿತ್ರದ ದೃಶ್ಯವೊಂದಕ್ಕಾಗಿ ಎರಡು ದಿನಗಳ ಕಾಲ ಉಪವಾಸವಿದ್ದು, ಕ್ಯಾಮೆರಾ ಮುಂದೆ ಖಡಕ್ ಆಗಿ ಸಾಯಿ ಪಲ್ಲವಿ ನಟಿಸಿದ್ರಂತೆ.

sai pallavi

ಚಿತ್ರದ ದೃಶ್ಯವೊಂದಕ್ಕೆ ನೈಜವಾಗಿ ಮೂಡಿ ಬರಬೇಕು ಎಂಬ ಕಾರಣಕ್ಕೆ ಎರಡು ದಿನಗಳ ಕಾಲ ಊಟ ಬಿಟ್ಟು ಸಾಯಿ ಪಲ್ಲವಿ ಕ್ಯಾಮೆರಾ ಮುಂದೆ ರಗಡ್ ಆಗಿ ನಟಿಸಿದ್ದಾರೆ. ಇದೀಗ ಈ ಸುದ್ದಿ ತಿಳಿದ ಅಭಿಮಾನಿಗಳು ಸಾಯಿ ಪಲ್ಲವಿ ಕಾರ್ಯ ವೈಖರಿಗೆ ಫಿದಾ ಆಗಿದ್ದಾರೆ. ಇದೀಗ ರಶ್ಮಿಕಾ ಜತೆ ಹೋಲಿಸಿ ನಿಜವಾದ ನ್ಯಾಶನಲ್ ಕ್ರಶ್ ನೀವೇ ಅಂತಾ ಸಾಯಿ ಪಲ್ಲವಿಯನ್ನು ಫ್ಯಾನ್ಸ್ ಹೊಗಳಿದ್ದಾರೆ. ಒಟ್ನಲ್ಲಿ ಜೂನ್ 17ಕ್ಕೆ ತೆರೆ ಕಾಣಲಿರುವ ವಿರಾಟ ಪರ್ವಂ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *