ಬೆಂಗಳೂರು: ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ತಂಡದ ನಾಯಕ ವಿರಾಟ್ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗುತ್ತಿದ್ದು ಈ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೊಹ್ಲಿ ಈ ರೀತಿ ಉತ್ತರ ನೀಡಿದ್ದಾರೆ.
`ನಾನು ಹೆಚ್ಚು ರನ್ ಗಳಿಸಿದ ಸಂದರ್ಭದಲ್ಲಿ ಹೋ.. ಕ್ರಿಕೆಟ್ ಜಗತ್ತಿನಲ್ಲೇ ಕೊಹ್ಲಿ ಕ್ರಾಂತಿ ಮೂಡಿಸಿದ್ದಾರೆ ಅಂತ ಹೇಳ್ತಿರ ಹೊರತು ಬೇರೆ ಏನೂ ಕೇಳಲ್ಲ. ಆದ್ರೆ ಆದರೆ ಈಗ ನಾನು ರನ್ ಗಳಿಸಿದೇ ಇರುವುದು ನಿಮಗೆ ಸಮಸ್ಯೆಯಾಗಿ ಕಾಣುತ್ತಿದೆಯೇ ಎಂದು ಮರು ಪ್ರಶ್ನೆಯನ್ನು ಎಸೆದರು. ನನ್ನಂತೆಯೇ ಉಳಿದವರ ಆಟದತ್ತನೂ ಗಮನ ಕೊಡಿ. ಒಂದು ಟೀಂ ನಲ್ಲಿ 10 ಮಂದಿ ಆಟಗಾರರಿದ್ದಾರೆ. ನಾನೇ ಎಲ್ಲವನ್ನೂ ಮಾಡಿ ಮುಗಿಸಿದರೆ ಇನ್ನುಳಿದವರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.
Advertisement
ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿದ ಕೊಹ್ಲಿ ಮೂರು ಪಂದ್ಯದಲ್ಲಿ ಒಟ್ಟು 52 ರನ್ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಸರಣಿಯಲ್ಲಿ ನನ್ನ ಆಟದ ಬಗ್ಗೆ ಸಂತೋಷವಿದೆ. ಒಂದು ವೇಳೆ ಎರಡೂ ಪಂದ್ಯಗಳಲ್ಲಿ 70 ರನ್ ಗಳಿಸಿದ್ದರೆ ನೀವು ಈ ಪ್ರಶ್ನೆಯನ್ನು ಕೇಳುತ್ತಿದ್ರಾ ಅಂತಾ ಪ್ರಶ್ನಿಸಿದ ಅವರು, ಸರಣಿ ಆಟಗಳ ಬಗ್ಗೆ ಖುಷಿ ಪಡಿ. ಅದೇ ನಮಗೆ ಗೆಲುವು ತಂದುಕೊಡುತ್ತೆ ಅಂತಾ ಕೊಹ್ಲಿ ಹೇಳಿದ್ದಾರೆ.
Advertisement
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಇಂಗ್ಲೆಂಡ್-ಟೀಂ ಇಂಡಿಯಾ ನಡುವಿನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 2 ರನ್ ಗೆ ಔಟಾಗಿದ್ದರು. ಈ ಪಂದ್ಯದಲ್ಲಿ ಸುರೇಶ್ ರೈನಾ, ಎಂಎಸ್ ಧೋನಿ, ಯುವರಾಜ್ ಸಿಂಗ್ ಅಬ್ಬರದ ಬ್ಯಾಟಿಂಗ್ ನಿಂದಾಗಿ ಭಾರತ 202 ರನ್ ಗಳಿಸಿತ್ತು. ಜತೆಗೆ ಇಂಗ್ಲೆಂಡ್ ತಂಡವನ್ನು 127 ರನ್ ಗಳಿಗೆ ಆಲೌಟ್ ಮಾಡುವ ಮೂಲಕ 75 ರನ್ ಗಳಿಂದ ಜಯಗಳಿಸಿತ್ತು.