ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ ಆರಂಭಿಕ ಎರಡೂ ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದು, ಇದೀಗ ಟ್ರೋಲ್‌ಗೆ ಗುರಿಯಾಗಿದೆ.
Virat Kohli ki legacy ko Smriti mandhana barkrar rakhti Hui
????????
Every time chokar franchise RCB@RCBTweets @imVkohli @mandhana_smriti pic.twitter.com/x3Ak1iTr97
— 200 marega aaj ????राजपूत (@Rajawat636714) March 5, 2023
Advertisement
ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitlas) ವಿರುದ್ಧ 60 ರನ್‌ಗಳ ಅಂತರದಿಂದ ಸೋತಿದ್ದ ಸ್ಮೃತಿ ಮಂದಾನ (Smriti Mandhana) ನಾಯಕತ್ವದ ಆರ್‌ಸಿಬಿ ತಂಡ, ತನ್ನ ಸರದಿಯ 2ನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ (HarmanPreetKaur) ನಾಯಕತ್ವದ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧವೂ ಹೀನಾಯ ಸೋಲು ಕಂಡಿದೆ. ಇದರಿಂದ ಆರ್‌ಸಿಬಿ ಅಭಿಮಾನಿಗಳು ಅಸಮಾಧಾನಗೊಂಡಿದ್ದು, ಟ್ರೋಲ್‌ಗೆ ಗುರಿಮಾಡಿದ್ದಾರೆ. ಇದನ್ನೂ ಓದಿ: ಶಫಾಲಿ, ಲ್ಯಾನಿಂಗ್ ಬೆಂಕಿ ಬ್ಯಾಟಿಂಗ್ – ಡೆಲ್ಲಿಗೆ 60 ರನ್‌ಗಳ ಭರ್ಜರಿ ಜಯ; RCBಗೆ ಹೀನಾಯ ಸೋಲು
Advertisement
Advertisement
`ಸ್ಮೃತಿ ಮಂದಾನ ಸಹ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಪರಂಪರೆಯನ್ನೇ ಮುಂದುವರಿಸಿದ್ದಾರೆ. ಪ್ರತಿಬಾರಿಯೂ ಆರ್‌ಸಿಬಿ ಚೋಕರ್ಸ್ ಫ್ರಾಂಚೈಸಿಯೇ’ ಎಂದು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ: 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿರುವ ಪ್ಯಾಟ್ – ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್ ಸಾರಥ್ಯ
Advertisement
WPLನ 4ನೇ ಪಂದ್ಯದಲ್ಲಿ ಟಾಸ್‌ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಮಹಿಳಾ ತಂಡ 18.4 ಓವರ್‌ಗಳಲ್ಲಿ 155 ರನ್‌ಗಳಿಗೆ ಸರ್ವಪತನ ಕಂಡಿತು. 156 ರನ್ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಬ್ಯಾಟಿಂಗ್‌ನೊಂದಿಗೆ 14.2 ಓವರ್‌ಗಳಲ್ಲೇ 159 ರನ್ ಚಚ್ಚಿ ಜಯಭೇರಿ ಬಾರಿಸಿತು. ಹೇಲಿ ಮ್ಯಾಥ್ಯೂಸ್ 38 ಎಸೆತಗಳಲ್ಲಿ ಸ್ಫೋಟಕ 77 ರನ್ (13 ಬೌಂಡರಿ, 1 ಸಿಕ್ಸರ್) ಚಚ್ಚಿದರೆ, ನ್ಯಾಟ್ ಸ್ಕಿವರ್-ಬ್ರಂಟ್ 29 ಎಸೆತಗಳಲ್ಲಿ 55 ರನ್ (9 ಬೌಂಡರಿ, 1 ಸಿಕ್ಸರ್) ಸಿಡಿಸಿ ಅಜೇಯರಾಗುಳಿದರು.