Connect with us

Cricket

ಒಳ್ಳೆ ಗಂಡನಾಗೋದು ಹೇಗೆಂಬ ಬುಕ್ ನೀಡ್ತೀನಿ ಎಂದ ರೋಹಿತ್- ನನಗೆ ಈ ಬುಕ್ ಬೇಕೆಂದ ಕೊಹ್ಲಿ

Published

on

ಬೆಂಗಳೂರು: ಕಳೆದ ವಾರ ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿಗೆ ಆಪ್ತರು, ಬಂಧುಗಳು ಹಾಗು ಅಪಾರ ಸಂಖ್ಯೆಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರುತ್ತಿದ್ದಾರೆ.

ವಿರುಷ್ಕಾ ಜೋಡಿ ಮದುವೆ ಸುದ್ದಿ ಹೊರಬೀಳುತ್ತಿದ್ದಂತೆ ಕ್ರಿಕೆಟಿಗ ರೋಹಿತ್ ಶರ್ಮಾ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದರು. ಇಬ್ಬರಿಗೂ ಶುಭಾಶಯಗಳು, ಒಳ್ಳೆ ಗಂಡನಾಗುವುದು ಹೇಗೆ ಎಂಬ ಹ್ಯಾಂಡ್ ಬುಕ್ ಕೊಡ್ತೀನಿ. ಅನುಷ್ಕಾ ಶರ್ಮಾ ನಿಮ್ಮ ಸರ್‍ನೇಮ್ ಹಾಗೇ ಇಟ್ಟುಕೊಳ್ಳಿ ಎಂದು ಟ್ವಿಟ್ಟರ್‍ನಲ್ಲಿ ಬರೆದಿದ್ದರು. ಇದನ್ನೂ ಓದಿ: ವಿರಾಟ್-ಅನುಷ್ಕಾ ಮದ್ವೆಗೆ ಅಸಮಧಾನ ವ್ಯಕ್ತಪಡಿಸಿದ ಬಿಜೆಪಿ ಶಾಸಕ

ಈ ಟ್ವೀಟ್ ಗೆ ವಿರಾಟ್ ಮಂಗಳವಾರ ಪ್ರತಿಕ್ರಿಯಿಸಿದ್ದು, ಹಹಹ, ಧನ್ಯವಾದಗಳು ರೋಹಿತ್. ಹಾಗೇ ಡಬಲ್ ಸೆಂಚುರಿ ಹ್ಯಾಂಡ್ ಬುಕ್ ಕೂಡ ಹಂಚಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಇವರಿಬ್ಬರ ತಮಾಷೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ದ್ರಾಕ್ಷಿ ತೋಟದ ಸತ್ಯ

ವಿರಾಟ್ ಹಾಗೂ ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು, ಡಿಸೆಂಬರ್ 21ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ. ವಿರಾಟ್ ಹಾಗೂ ಅನುಷ್ಕಾ ಮದುವೆ ವಿಷಯ ತಿಳಿಯುತ್ತಿದ್ದಂತೆ ಸೌತ್ ಆಫ್ರಿಕಾ ಹಿಟ್ಟರ್ ಎಬಿ ಡಿವಿಲಿಯರ್ಸ್ ವಿಶ್ ಮಾಡಿದ್ದು, ಹಲವು ಮಕ್ಕಳಾಗಲಿ ಎಂದು ಹರಸಿದ್ದರು. ಇದನ್ನೂ ಓದಿ: ಗಿಫ್ಟ್ ಕೊಟ್ಟು ವಿರುಷ್ಕಾಗೆ ಸರ್ಪ್ರೈಸ್ ನೀಡಿದ ದೀಪಿಕಾ-ರಣವೀರ್

ಇದನ್ನೂ ಓದಿ: ದ್ರಾಕ್ಷಿ ತೋಟದ ರೆಸಾರ್ಟ್ ಗೆ ಒಂದು ದಿನಕ್ಕೆ ಇಷ್ಟು ವ್ಯಯಿಸಿದ್ರಂತೆ ವಿರುಷ್ಕಾ!

Click to comment

Leave a Reply

Your email address will not be published. Required fields are marked *